ಖಗರಿಯಾ (ಬಿಹಾರ):ಪ್ರೀತಿ ಹಾಗೂ ಸೇಡಿನ ವಿಚಿತ್ರ ಘಟನೆ ಬಿಹಾರದಲ್ಲಿ ಜರುಗಿದೆ. ಮಾನಸಿಕ ಖಿನ್ನತೆಗೊಳಗಾದ ಪತಿಯೊಬ್ಬ ಇಲ್ಲಿನ ಖಗರಿಯಾ ಎಂಬಲ್ಲಿ ತನ್ನ ಹೆಂಡತಿಯ ಪ್ರೇಮಿಯ ಪತ್ನಿಯನ್ನೇ ವಿವಾಹವಾಗಿದ್ದಾನೆ. ನಾಲ್ಕು ಮಕ್ಕಳನ್ನು ಹೊಂದಿರುವ ವ್ಯಕ್ತಿಯನ್ನು ಹೆಂಡತಿ ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಆತ ಈ ರೀತಿಯ ವಿಲಕ್ಷಣ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಹುಟ್ಟಿಸಿದೆ.
ಇಬ್ಬರೂ ಮಹಿಳೆಯರ ಹೆಸರೂ ಒಂದೇ:ಖಗರಿಯಾ ಜಿಲ್ಲೆಯ ಪಟ್ಟಣದಲ್ಲಿ ನಡೆದ ಈ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದು ವಿಚಿತ್ರವೆಂದರೆ, ವಿವಾಹವಾದ ಇಬ್ಬರೂ ಮಹಿಳೆಯರ ಹೆಸರು ಕೂಡಾ ರೂಬಿ ದೇವಿ. ಇಡೀ ಕುಟುಂಬದ ಒಪ್ಪಿಗೆಯೊಂದಿಗೆ ಈ ವಿವಾಹ ನೆರವೇರಿಸಲಾಗಿದೆ.
ವಿವರ: ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ 2009ರಲ್ಲಿ ರೂಬಿ ದೇವಿ ಅವರನ್ನು ವಿವಾಹವಾದರು. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಆದರೆ, ಇತ್ತೀಚೆಗೆ ರೂಬಿ, ಮುಖೇಶ್ ಜೊತೆಗೆ ಪ್ರೇಮ ಸಂಬಂಧ ಬೆಳೆಸಿದ್ದಾರೆ. ಈತ ಇದೇ ಜಿಲ್ಲೆಯ ಪಾಸ್ರಾಹಾ ಗ್ರಾಮದ ನಿವಾಸಿ. ಮದುವೆಗೂ ಮುನ್ನ ರೂಬಿ ಪಾಸ್ರಾಹಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆತನ ಜೊತೆಗೆ ದೀರ್ಘಕಾಲದವರೆಗೆ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಸೆಂಟ್ರಲ್ ಜೈಲಿನಲ್ಲೇ ಗ್ಯಾಂಗ್ ವಾರ್, ಇಬ್ಬರು ಗ್ಯಾಂಗ್ಸ್ಟರ್ಗಳ ಕೊಲೆ