ಕರ್ನಾಟಕ

karnataka

ETV Bharat / bharat

ಕೌಟುಂಬಿಕ ವಿಚಾರಕ್ಕಾಗಿ ಶರದ್ ಪವಾರ್‌ಗೆ ಬೆದರಿಕೆ ಕರೆ; ಬಿಹಾರದಲ್ಲಿ ಆರೋಪಿ ಸೆರೆ - ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್

ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಿಹಾರ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

bihar-man-arrested-for-threatening-sharad-pawar
ಶರದ್​ ಪವಾರ್​ಗೆ ಜೀವ ಬೆದರಿಕೆ ಕೇಸ್​: ಬಿಹಾರದಲ್ಲಿ ಆರೋಪಿ ಬಂಧನ

By

Published : Dec 14, 2022, 3:10 PM IST

ಮುಂಬೈ(ಮಹಾರಾಷ್ಟ್ರ):ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (ಎನ್​ಸಿಪಿ)ದ ಅಧ್ಯಕ್ಷ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಿಹಾರದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ನಾರಾಯಣ್ ಕುಮಾರ್ ಸೋನಿ ಬಂಧಿತ ಆರೋಪಿ. ಈತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಶರದ್ ಪವಾರ್ ಅವರ 'ಸಿಲ್ವರ್ ಓಕ್‌' ನಿವಾಸಕ್ಕೆ ಅನಾಮಧೇಯ ದೂರವಾಣಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಪುಣೆಯಲ್ಲಿ 10 ವರ್ಷಗಳ ಕಾಲ ವಾಸವಿದ್ದ. ಪತ್ನಿ ಈತನನ್ನು ತೊರೆದು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ವಿಚಾರವಾಗಿ ಶರದ್ ಪವಾರ್ ಅವರನ್ನು ಆರೋಪಿ ಸಂಪರ್ಕಿಸಿದ್ದಾನೆ. ಆದರೆ, ಪವಾರ್​ ಸ್ಪಂದಿಸಿರಲಿಲ್ಲ. ಇದರಿಂದ ಕೋಪಗೊಂಡು ಬೆದರಿಕೆ ಹಾಕಿದ್ದಾಗಿ ವಿಚಾರಣೆಯಲ್ಲಿ ಹೇಳಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್‌ಗೆ ಕೊಲೆ ಬೆದರಿಕೆ ಕರೆ

ABOUT THE AUTHOR

...view details