ಪಾಟ್ನಾ: ಸೇವೆಯಿಂದ ಅಮಾನತುಗೊಂಡ ಐಎಎಸ್ ಅಧಿಕಾರಿ ಆದಿತ್ಯ ಕುಮಾರ್ ಅವರಿಗೆ ಸೇರಿದ, ಬಿಹಾರ್ ಮತ್ತು ಉತ್ತರ ಪ್ರದೇಶದಲ್ಲಿನ ಮೂರು ಸ್ಥಳಗಳ ಮೇಲೆ ವಿಶೇಷ ವಿಚಕ್ಷಣಾ ತಂಡದ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡುತ್ತಿದ್ದಾರೆ. ಸೇವೆಯಲ್ಲಿರುವಾಗ ಆದಿತ್ಯ ಕುಮಾರ್ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿವೆ.
ವಿಶೇಷ ನ್ಯಾಯಾಧೀಶ ವಿಜಿಲೆನ್ಸ್ ನ್ಯಾಯಾಲಯ (ಪಾಟ್ನಾ) ಹೊರಡಿಸಿದ ಸರ್ಚ್ ವಾರಂಟ್ನ ಮೇಲೆ ಪಾಟ್ನಾ, ಗಾಜಿಯಾಬಾದ್ ಮತ್ತು ಮೀರತ್ (ಉತ್ತರ ಪ್ರದೇಶ) ನಲ್ಲಿರುವ ಐಪಿಎಸ್ ಅಧಿಕಾರಿಯ ವಸತಿ ಆವರಣಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ವಿಶೇಷ ವಿಷಕ್ಷಣಾ ತಂಡದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ನಯ್ಯರ್ ಹಸ್ನೈನ್ ಖಾನ್ ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ವರ್ಷದ ನವೆಂಬರ್‌ನಲ್ಲಿ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ (ಇಒಯು) ಇಂಟರ್‌ಪೋಲ್ ಸಂಪರ್ಕಿಸಿ ತಲೆಮರೆಸಿಕೊಂಡಿರುವ ಐಪಿಎಸ್ ಅಧಿಕಾರಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿತ್ತು. ತನ್ನ ಮೇಲಿರುವ ಮದ್ಯ ಹಗರಣದ ಕೇಸ್ ಮುಚ್ಚಲು ಇವರು ಮತ್ತೊಬ್ಬ ವಂಚಕನ ಸಹಾಯ ಪಡೆದಿದ್ದರು ಎಂಬ ಆರೋಪಗಳಿವೆ.