ಗೃಹರಕ್ಷಕ ಸಿಬ್ಬಂದಿ ರೇಣುದೇವಿ ವೈಶಾಲಿ : ಬಿಹಾರದ 49 ವರ್ಷದ ಮಹಿಳೆಯೊಬ್ಬರು ಗೃಹರಕ್ಷಕ ದಳಕ್ಕೆ ಅರ್ಜಿ ಸಲ್ಲಿಸಿದ 14 ವರ್ಷಗಳ ನಂತರ ನೇಮಕಾತಿ ಪತ್ರವನ್ನು ಪಡೆದಿದ್ದಾರೆ. ಇದರಿಂದ ಖುಷಿಗೊಂಡಿರುವ ಅವರು ಉತ್ಸಾಹದಿಂದ ನೇಮಕಾತಿ ಪತ್ರವನ್ನು ಸ್ವೀಕರಿಸಿ ನಂತರ ಕೆಲಸಕ್ಕೆ ಸೇರಿದ್ದಾರೆ.
ವೈಶಾಲಿಯ ಹಾಜಿಪುರದಲ್ಲಿ ವಾಸವಾಗಿರುವ ಮಹಿಳೆ ರೇಣು ದೇವಿ (49) ಉದ್ಯೋಗ ಪಡೆದವರು. 14 ವರ್ಷಗಳ ಹಿಂದೆ ಅಂದರೆ 2009ರಲ್ಲಿ ಅರ್ಜಿ ಸಲ್ಲಿಸಿದ ಕೆಲಸಕ್ಕೆ ಕರೆ ಬಂದಾಗ ರೇಣುದೇವಿ ಅವರು ತಮ್ಮ ಜೀವನದಲ್ಲಿ ಆಶ್ಚರ್ಯವನ್ನು ಪಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ಸುದ್ದಿ ಅನಿರೀಕ್ಷಿತ. ಆದರೆ, ತನಗೆ ಅತ್ಯಂತ ಪ್ರಿಯವಾದದ್ದು ಎಂದು ಮುಖದಲ್ಲಿ ನಗುವನ್ನು ಬೀರುತ್ತ ಹೇಳಿಕೊಂಡಿದ್ದಾರೆ. ಈ ಸುದ್ದಿ ತನ್ನ ಮಗ, ಸೊಸೆಯ ಜೀವನದಲ್ಲಿ ಸಂತೋಷವನ್ನು ತಂದಿದೆ ಎಂದಿದ್ದಾರೆ.
ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ ಮತ್ತು ತರಬೇತಿಯನ್ನೂ ಪೂರ್ಣಗೊಳಿಸಿದ್ದೇನೆ. ಅಂತಿಮವಾಗಿ ಗೃಹರಕ್ಷಕ ದಳದ ಸಮವಸ್ತ್ರವನ್ನು ಧರಿಸುವ ನನ್ನ ಕನಸು ನನಸಾಗಿದೆ. ನನಗೆ ತುಂಬಾ ಸಂತೋಷವಾಗಿದೆ ಎಂದು ರೇಣು ಹಾಜಿಪುರದ ಬಾಗ್ ದುಲ್ಹನ್ ಮೊಹಲ್ಲಾದಲ್ಲಿ ಕುಳಿತು ಹೇಳಿದರು.
ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಸೋಗಿನಲ್ಲಿ ವಂಚಿಸಿ ಯುವಕನ ಕೊಲೆ: ಆರೋಪಿ ಬಂಧನ
ಅವರು ಸಂತೋಷದಿಂದ ನೇಮಕಾತಿ ಪತ್ರವನ್ನು ಎಲ್ಲರಿಗೂ ತೋರಿಸಿದ್ದಾರೆ. ರೇಣು ದೇವಿ ಅವರು ಸುಮಾರು 25 ವರ್ಷಗಳ ಹಿಂದೆ ಅಂದರೆ 1990ರಲ್ಲಿ ವಿವಾಹವಾಗಿದ್ದರು. ಮೂರು ಮಕ್ಕಳು ಜನಿಸಿದ ನಂತರ ಅವರು ಗೃಹ ರಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ 14 ವರ್ಷಗಳಲ್ಲಿ ರೇಣುದೇವಿ ತಮ್ಮ ಕುಟುಂಬದ ಜವಾಬ್ದಾರಿಯನ್ನು ಯಥಾವತ್ತಾಗಿ ಪೂರೈಸಿದ್ದಾರೆ.
ಇದನ್ನೂ ಓದಿ:ಅದಾನಿ ಸಮೂಹಕ್ಕೆ ನೆರವು ನೀಡಲು ಮುಂದಾದ 3 ಜಪಾನ್ ಬ್ಯಾಂಕ್ಗಳು
'ಗೃಹ ರಕ್ಷಕ ದಳದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಳಿಕ ಎಲ್ಲ ಪ್ರಾಥಮಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜಿಲ್ಲೆಯಿಂದ ಕಳುಹಿಸಲಾಗಿದೆ. ರೋಸ್ಟರ್‌ನಲ್ಲಿನ ವಿಳಂಬದಿಂದಾಗಿ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ' ಎಂದು ಹಾಜಿಪುರದ ಗೃಹರಕ್ಷಕ ದಳದ ಡಿಎಸ್ಪಿ ಅಶೋಕ್ ಕುಮಾರ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಇನ್ನು 11 ಮಹಿಳೆಯರು ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ರಾಜ್ಯ ಸರ್ಕಾರದಿಂದ ಉದ್ಯೋಗ ನೀಡಲಾಗಿದೆ.
ಬ್ಯಾಂಕ್ ಆಫ್ ಬರೋಡಾದಿಂದ ಹುದ್ದೆಗೆ ಆಹ್ವಾನ:ಬ್ಯಾಂಕಿಂಗ್ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡ ಇದೀಗ ಸಿಹಿ ಸುದ್ದಿಯನ್ನು ನೀಡಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕ್ರೆಡಿಟ್ ಅನಾಲಿಸ್ಟ್, ರಿಲೇಷನ್ಶಿಪ್ ಮ್ಯಾನೇಜರ್ ಸೇರಿದಂತೆ ಒಟ್ಟು 157 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಭಾರತಾದ್ಯಂತ ಈ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ, ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.
ಹುದ್ದೆಯ ವಿವರ: ರಿಲೇಷನ್ಶಿಪ್ ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್, ಫೊರೆಕ್ಸ್ ಅಕ್ವಾಸಿಷನ್ ಅಂಡ್ ರಿಲೇಷನ್ಶಿಪ್ ಮ್ಯಾನೇಜರ್ ನ ಸ್ಕೇಲ್ 2 ಮತ್ತು 3 ಹುದ್ದೆ ಸೇರಿದಂತೆ ಒಟ್ಟು 157 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ:ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ; 157 ಹುದ್ದೆಗೆ ಅರ್ಜಿ ಆಹ್ವಾನ