ಕರ್ನಾಟಕ

karnataka

ETV Bharat / bharat

ದತ್ತಿ ಆಸ್ತಿಗೆ ಖನ್ನ.. ಬಿಹಾರದ ಎಲ್ಲ ದೇವಸ್ಥಾನಗಳ ನೋಂದಣಿಗೆ ಸರ್ಕಾರದ ಕಡ್ಡಾಯ ಸೂಚನೆ - bihar govt order to registration temples

ಬಿಹಾರದ ಧಾರ್ಮಿಕ ಸಂಸ್ಥೆಗಳ ಆಸ್ತಿಯನ್ನು ಲಪಟಾಯಿಸುವ ದುಷ್ಟ ಶಕ್ತಿಗಳಿಗೆ ಕಡಿವಾಣ ಹಾಕಲು ಸಿಎಂ ನಿತೀಶ್​ ಕುಮಾರ್​ ನೇತೃತ್ವದ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಎಲ್ಲ ದೇವಸ್ಥಾನ, ಮಠ, ಟ್ರಸ್ಟ್​ಗಳ ಆಸ್ತಿಯನ್ನು ಸರ್ಕಾರದಲ್ಲಿ ನೋಂದಣಿ ಮಾಡಿಸಲು ಸೂಚಿಸಿದೆ.

bihar-govt-order-to-registration-temples-and-trusts
ಬಿಹಾರದ ಎಲ್ಲ ದೇವಸ್ಥಾನಗಳ ನೋಂದಣಿಗೆ ಸರ್ಕಾರ ಕಡ್ಡಾಯ ಸೂಚನೆ

By

Published : Nov 5, 2022, 3:22 PM IST

ಪಾಟ್ನಾ(ಬಿಹಾರ):ದೇವಸ್ಥಾನ, ಮಠ, ಟ್ರಸ್ಟ್​ಗಳಿಗೆ ನೀಡಲಾದ ಭೂಮಿಯನ್ನು ಅಕ್ರಮವಾಗಿ ಬೇರೆಯವರಿಗೆ ವರ್ಗಾವಣೆ, ಮಾರಾಟ ಮತ್ತು ಒತ್ತುವರಿ ಮಾಡುವುದನ್ನು ತಡೆಯಲು ಅಲ್ಲಿನ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಇನ್ನು ಮೂರು ತಿಂಗಳೊಳಗೆ ಎಲ್ಲ ಧಾರ್ಮಿಕ ಸಂಸ್ಥೆಗಳು ಧಾರ್ಮಿಕ ದತ್ತಿ ಇಲಾಖೆಯಡಿ ನೋಂದಣಿ ಮಾಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕಾನೂನು ಸಚಿವ ಶಮೀಮ್ ಅಹ್ಮದ್, ರಾಜ್ಯದ ಹಲವು ದೇವಸ್ಥಾನಗಳು ಮತ್ತು ಮಠಗಳ ಅರ್ಚಕರು ದಾನವಾಗಿ ಬಂದ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾವಣೆ ಅಥವಾ ಮಾರಾಟ ಮಾಡಿ ಅಕ್ರಮ ನಡೆಸಿವೆ. ಅಲ್ಲದೇ, ನೋಂದಾಯಿತ ದೇವಾಲಯಗಳು ಮತ್ತು ಮಠಗಳ ಭೂಮಿಯನ್ನೂ ಅತಿಕ್ರಮಣ ಮಾಡಿದ ಬಗ್ಗೆಯೂ ತಿಳಿದು ಬಂದಿದೆ. ಹೀಗಾಗಿ ಎಲ್ಲ ಧಾರ್ಮಿಕ ಕ್ಷೇತ್ರಗಳು ಸರ್ಕಾರದ ಸುಪರ್ದಿಗೆ ತರಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಮಠದ ಭೂಮಿಗೆ ಬೇಲಿ:ಧಾರ್ಮಿಕ ಸಂಸ್ಥೆಗಳ ಭೂಮಿಯ ಅಕ್ರಮ ತಡೆಯಲು ಶೀಘ್ರವೇ ಆಸ್ತಿಗೆ ಬೇಲಿ ಹಾಕಿ ಬಂದೋಬಸ್ತ್​ ಮಾಡಲಾಗುವುದು. ಹಿಂದೂ ಧಾರ್ಮಿಕ ಟ್ರಸ್ಟ್‌ಗಳ ಕಾಯಿದೆ-1950 ರ ಅಡಿ ನೋಂದಾಯಿಸಿ, ಅನಧಿಕೃತ ಶಕ್ತಿಗಳಿಂದ ಸಂಸ್ಥೆಗಳನ್ನು ರಕ್ಷಿಸಲಾಗುವುದು ಎಂದು ಸಚಿವರು ಹೇಳಿದರು.

4 ಸಾವಿರಕ್ಕೂ ಅಧಿಕ ಧಾರ್ಮಿಕ ಸಂಸ್ಥೆಗಳ ನೋಂದಣಿ:ರಾಜ್ಯದಲ್ಲಿ ನೋಂದಣಿಯಾಗದೇ ಇರುವ ದೇವಾಲಯಗಳು, ಟ್ರಸ್ಟ್​, ಮಠಗಳು 4 ಸಾವಿರಕ್ಕೂ ಅಧಿಕವಾಗಿವೆ. ಈ ಹಿಂದೆಯೂ ನೋಂದಣಿಗೆ ಸೂಚನೆ ನೀಡಿದಾಗ್ಯೂ ಇದು ಜಾರಿಗೆ ಬಂದಿಲ್ಲ. ಮುಂದಿನ 3 ತಿಂಗಳ ಒಳಗೆ ಕಡ್ಡಾಯವಾಗಿ ಸಂಸ್ಥೆಗಳನ್ನು ಸರ್ಕಾರದ ಅಡಿ ತರಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.

ವಿಫಲವಾದರೆ ಕ್ರಮದ ಎಚ್ಚರಿಕೆ:ಇನ್ನು ಸರ್ಕಾರದ ಆದೇಶವನ್ನು ಪಾಲಿಸದ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಚಿವರು, ದೇವಸ್ಥಾನಗಳು, ಮಠ ಮತ್ತು ಟ್ರಸ್ಟ್‌ಗಳನ್ನು ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಸಲು ಅಧಿಕಾರಿಗಳು ವಿಫಲವಾದರೆ ಸರ್ಕಾರ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಖಂಡಿತ. ಆಯಾ ಧಾರ್ಮಿಕ ಸಂಸ್ಥೆಗಳ ಆಸ್ತಿಗಳಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ಬೇಲಿ ಹಾಕಿ ಭದ್ರತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ದೇವಸ್ಥಾನಗಳ ಒಡೆತನದಲ್ಲಿರುವ ಆಸ್ತಿಯೆಷ್ಟು?:ಸರ್ಕಾರಿ ಅಂಕಿ - ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ನೋಂದಾಯಿತ ದೇವಾಲಯಗಳ ಸಂಖ್ಯೆ 3002 ಆಗಿವೆ. ಅವುಗಳು 18,500 ಎಕರೆಗೂ ಹೆಚ್ಚು ಭೂಮಿ ಹೊಂದಿವೆ. ಇನ್ನು ಸುಮಾರು 4055 ನೋಂದಣಿಯಾಗದ ದೇವಾಲಯಗಳು ಮತ್ತು ಮಠಗಳು ಇವೆ. ಇವುಗಳು 4,400 ಎಕರೆಗಳಿಗಿಂತ ಹೆಚ್ಚು ಆಸ್ತಿಯ ಒಡೆತನ ಹೊಂದಿವೆ.

ಓದಿ:ಬಸವಲಿಂಗ ಸ್ವಾಮೀಜಿ ‌ಆತ್ಮಹತ್ಯೆ ಪ್ರಕರಣ: ಆರೋಪಿಗಳಿಗೆ ನ.15ರ ವರೆಗೆ ನ್ಯಾಯಾಂಗ ಬಂಧನ

ABOUT THE AUTHOR

...view details