ಪಾಟ್ನಾ(ಬಿಹಾರ):ಬಿಹಾರದಲ್ಲಿ ಚಿನ್ನದ ಗಣಿ ಪತ್ತೆ ನಂತರ ಪೆಟ್ರೋಲಿಯಂ ನಿಕ್ಷೇಪಗಳು ಇರುವ ಬಗ್ಗೆ ಒಎನ್‌ಜಿಸಿ ಪ್ರಸ್ತಾಪಿಸಿದೆ. ಇದಕ್ಕಾಗಿ ಪೆಟ್ರೋಲಿಯಂ ಅನ್ವೇಷಣೆಗೆ ಪರವಾನಗಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಗೆ ಬಿಹಾರ ಸರ್ಕಾರ ಅನುಮೋದನೆ ನೀಡಿದೆ. ಹೀಗಾಗಿ ಒಎನ್‌ಜಿಸಿ ಈಗ ಬಕ್ಸಾರ್ ಮತ್ತು ಸಮಷ್ಟಿಪುರದ ಗಂಗಾನದಿಯ ಜಲಾನಯನ ಪ್ರದೇಶದ 360 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಪೆಟ್ರೋಲಿಯಂ ನಿಕ್ಷೇಪಕ್ಕಾಗಿ ಅನ್ವೇಷಣೆ ನಡೆಸಲಿದೆ. ಪೆಟ್ರೋಲಿಯಂ ನಿಕ್ಷೇಪಗಳು ಕಂಡು ಬಂದಲ್ಲಿ ಅದು ಬಿಹಾರವನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯಲಿದೆ.
ಪೆಟ್ರೋಲಿಯಂ ಪರಿಶೋಧನೆ ಪರವಾನಗಿ ಪಡೆದ ನಂತರ ಸಮಷ್ಟಿಪುರ ಮತ್ತು ಬಕ್ಸಾರ್‌ನ ಗಂಗಾ ಜಲಾನಯನ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತೈಲ ಅನ್ವೇಷಿಸಲು ಮುಂದಾಗಲಿದೆ.
ಒಎನ್‌ಜಿಸಿಗೆ ದೊರೆತ ಪರವಾನಗಿ: ಸಮಷ್ಟಿಪುರ ಜಿಲ್ಲೆಯ 308 ಕಿಮೀ ಮತ್ತು ಬಕ್ಸಾರ್‌ನ 52.13 ಕಿಲೋ ಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಸಿಗುವ ಸೂಚನೆಗಳಿವೆ. ಇಷ್ಟು ದೊಡ್ಡ ಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಹುಡುಕಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಒಎನ್‌ಜಿಸಿಗೆ ಅನುಮತಿ ನೀಡಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತೈಲ ಪರಿಶೋಧನೆ ಮಾಡಲಾಗುವುದು ಎಂದು ಒಎನ್‌ಜಿಸಿ ಹೇಳಿದೆ.