ಕರ್ನಾಟಕ

karnataka

ETV Bharat / bharat

ರಾಮ ದೇವರಲ್ಲ, ರಾಮಾಯಣದ ಪಾತ್ರವಷ್ಟೇ: ಬಿಹಾರದ ಮಾಜಿ ಸಿಎಂ ವಿವಾದ - ರಾಮ ದೇವರಲ್ಲ ಎಂದ ಜಿತನ್​ ರಾಮ್ ಮಾಂಝಿ

ರಾಮನವಮಿ ಶೋಭಾಯಾತ್ರೆ ವೇಳೆ ಗಲಭೆ ಉಂಟಾದ ಪ್ರಕರಣಗಳ ಮಧ್ಯೆಯೇ ರಾಮ ದೇವರಲ್ಲ ಎಂದು ಬಿಹಾರದ ಮಾಜಿ ಸಿಎಂ ಜಿತನ್​ ರಾಮ್ ಮಾಂಝಿ ಹೇಳಿಕೆ ನೀಡಿದ್ದು ವಿವಾದವಾಗಿದೆ.

bihar-fomrmer-cm
ಜಿತನ್​ ರಾಮ್ ಮಾಂಝಿ

By

Published : Apr 16, 2022, 9:02 AM IST

ಪಾಟ್ನಾ(ಬಿಹಾರ):ಶ್ರೀರಾಮ ಒಬ್ಬ ಪೌರಾಣಿಕ ಪಾತ್ರವಷ್ಟೇ 'ದೇವರಲ್ಲ' ಎಂದು ಪ್ರತಿಪಾದಿಸಿದ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ. ಮಾಂಝಿ ಅವರು ನಾಸ್ತಿಕರಾಗಿದ್ದರೆ, ಯಾವ ದೇವರನ್ನು ನಂಬುತ್ತಾರೆ ಎಂಬುದನ್ನು ತಿಳಿಸಬೇಕು ಎಂದು ಸವಾಲು ಹಾಕಿದ್ದಾರೆ.

ಮಾಜಿ ಸಿಎಂ ಮಾಂಝಿ ಹೇಳಿದ್ದೇನು?:ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿಹಾರದ ಮಾಜಿ ಸಿಎಂ ಮತ್ತು ಬಿಜೆಪಿಯ ಪಾಲುದಾರದಾಗಿರುವ ಜಿತನ್​ ರಾಮ್ ಮಾಂಝಿ, ನಾನು ರಾಮನನ್ನು ನಂಬುವುದಿಲ್ಲ. ರಾಮನು ದೇವರಲ್ಲ. ತುಳಸೀದಾಸ್​ ಮತ್ತು ವಾಲ್ಮೀಕಿ ತುಳಸಿದಾಸ್ ಮತ್ತು ವಾಲ್ಮೀಕಿ ಅವರ ಸಂದೇಶವನ್ನು ಹರಡಲು ಸೃಷ್ಟಿಸಿದ ಪಾತ್ರವೇ ಶ್ರೀರಾಮ ಎಂದು ಹೇಳಿದ್ದಾರೆ.

ವಾಲ್ಮೀಕಿ ರಾಮಾಯಣವನ್ನು ಬರೆದಿದ್ದಾರೆ ಮತ್ತು ಅವರ ಬರಹಗಳಲ್ಲಿ ಅನೇಕ ಉತ್ತಮ ಸಂದೇಶಗಳಿವೆ. ನಾವು ಅವುಗಳನ್ನು ನಂಬುತ್ತೇವೆ. ತುಳಸೀದಾಸ್ ಮತ್ತು ವಾಲ್ಮೀಕಿಯನ್ನು ನಂಬುತ್ತೇನೆ. ಆದರೆ, ರಾಮನನ್ನು ನಂಬಲ್ಲ ಎಂದು ಮಾಂಝಿ ಹೇಳಿದ್ದರು.

ರಾಮನು ಶಬರಿ ನೀಡಿದ ಹಣ್ಣುಗಳನ್ನು ತಿಂದಿದ್ದಾರೆ ಎಂದು ಹೇಳಲಾಗುತ್ತದೆ. ಶಬರಿ ನೀಡಿದ ಹಣ್ಣನ್ನು ರಾಮ ತಿಂದಿದ್ದ ಎನ್ನುವುದಾದರೆ, ನಾವು(ದಲಿತರು) ನೀಡಿದ ಹಣ್ಣನ್ನು ರುಚಿ ನೋಡುವುದು ಬಿಡಿ. ನಾವು ಮುಟ್ಟಿದ ಹಣ್ಣನ್ನಾದರೂ ನೀವು ತಿನ್ನುತ್ತೀರಾ ಎಂದು ಜಾತಿವ್ಯವಸ್ಥೆಯ ವಿರುದ್ಧ ಟೀಕಿಸಿದ್ದರು.

ಓದಿ:ಎಸ್‌ಪಿ ಶೋಭಾ ಕಟಾವ್ಕರ್ ಬೆಂಗಳೂರಿನ ನಿವಾಸದಲ್ಲಿ ಶವವಾಗಿ ಪತ್ತೆ

ABOUT THE AUTHOR

...view details