ಕರ್ನಾಟಕ

karnataka

ETV Bharat / bharat

ಬಿಹಾರ ಚುನಾವಣಾ ಫಲಿತಾಂಶ : ಮತದಾರರಿಗೆ ಧನ್ಯವಾದ ಸಲ್ಲಿಸಿದ ಬಿಜೆಪಿ ಮುಖಂಡರು - Bihar election

ಬಿಹಾರ ವಿಧಾನ ಸಭೆಯ ಚುನಾವಣೆಯ ಫಲಿತಾಂಶ ಅಂತಿಮಗೊಳ್ಳುತ್ತ ಸಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ಬಿಜೆಪಿ ನಾಯಕರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

bihar-election-results-bjp-leaders-thanking-voters
ಮತದಾರರಿಗೆ ಧನ್ಯವಾದ ಸಲ್ಲಿಸಿದ ಬಿಜೆಪಿ ಮುಖಂಡರು

By

Published : Nov 11, 2020, 1:39 AM IST

ನವದೆಹಲಿ: ಬಿಹಾರದ ಚುನಾವಣಾ ಫಲಿತಾಂಶ ಹಿನ್ನೆಲೆ ಪಿಎಂ ಹಾಗೂ ಅಮಿತ್​ ಶಾ ಸೇರಿದಂತೆ ಹಲವರು ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬಿಹಾರದಲ್ಲಿ ಅಭಿವೃದ್ಧಿ ಪ್ರಗತಿ ಮತ್ತು ಉತ್ತಮ ಆಡಳಿತವನ್ನು ಮತ್ತೊಮ್ಮೆ ಆರಿಸಿದ್ದಕ್ಕಾಗಿ ರಾಜ್ಯದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಧನ್ಯವಾದಗಳು ಎಂದು ಗೃಹ ಸಚಿವ ಮತ್ತು ಬಿಜೆಪಿ ಮುಖಂಡ ಅಮಿತ್ ಶಾ ಟ್ವೀಟ್​ ಮಾಡಿದ್ದಾರೆ.

ಜನರು ಎನ್‌ಡಿಎಯ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ​ ವಿಶ್ವ ಎಂಬ ಮಂತ್ರವನ್ನು ಒಪ್ಪಿಕೊಂಡಿದ್ದಾರೆ. ಪ್ರತಿ ಪ್ರದೇಶದ ಅಭಿವೃದ್ಧಿ ಮಾಡಲಾಗುವುದು ಎಂದು ಬಿಹಾರದ ನಾಗರಿಕರಿಗೆ ನಾನು ಭರವಸೆ ನೀಡಲು ಬಯಸುತ್ತೇನೆ ಎಂದು ಪಿಎಂ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ಇಂದಿನ ಜನಾದೇಶಕ್ಕೆ ನಾನು ಬಿಹಾರದ ಜನರಿಗೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details