ಪಾಟ್ನಾ: ಬಿಹಾರ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೂರೇ ದಿನದಲ್ಲಿ ಮೇವಾಲಾಲ್ ಚೌಧರಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹುದ್ದೆಗೇರಿದ 3 ದಿನದಲ್ಲೇ ಬಿಹಾರ ಶಿಕ್ಷಣ ಮಂತ್ರಿ ರಾಜೀನಾಮೆ! - corruption charge against Mewa Lal
ಮೂರು ದಿನಗಳ ಹಿಂದೆಯಷ್ಟೇ ಬಿಹಾರದ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮೇವಾಲಾಲ್ ಚೌಧರಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. 2017ರಲ್ಲಿ ಭಗಲ್ಪುರ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಭಾರೀ ಹಗರಣಗಳನ್ನು ಎಸಗಲಾಗಿದೆ ಎಂಬ ಆಪಾದನೆ ಇದೆ.
![ಹುದ್ದೆಗೇರಿದ 3 ದಿನದಲ್ಲೇ ಬಿಹಾರ ಶಿಕ್ಷಣ ಮಂತ್ರಿ ರಾಜೀನಾಮೆ! Mewa Lal Choudhary](https://etvbharatimages.akamaized.net/etvbharat/prod-images/768-512-9593108-thumbnail-3x2-aaaa.jpg)
ಮೇವಾ ಲಾಲ್
ಮೂರು ದಿನಗಳ ಹಿಂದೆಯಷ್ಟೇ ಬಿಹಾರದ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೇವಾಲಾಲ್ ಚೌಧರಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. 2017ರಲ್ಲಿ ಭಗಲ್ಪುರ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಭಾರೀ ಹಗರಣಗಳನ್ನು ಎಸಗಲಾಗಿದೆ ಎಂಬ ಆಪಾದನೆ ಇದೆ.
ಈ ಕುರಿತು ಮಾತನಾಡಿದ ಮೇವಾಲಾಲ್, ಚಾರ್ಜ್‌ಶೀಟ್ ಸಲ್ಲಿಸಿದಾಗ ಅಥವಾ ನ್ಯಾಯಾಲಯವು ಆದೇಶ ನೀಡಿದಾಗ ಮಾತ್ರ ಆರೋಪ ಸಾಬೀತಾಗುತ್ತದೆ. ನನ್ನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಯಾರೂ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.