ಪಶ್ಚಿಮ ಚಂಪಾರಣ್(ಬಿಹಾರ್):ಇಲ್ಲೊಬ್ಬ ಆಸಾಮಿ ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಅವಾಜ್ ಹಾಕಿ ಈಗ ಕಂಬಿ ಎಣಿಸುತ್ತಿದ್ದಾನೆ. ಬಿಹಾರದ ಪಶ್ಚಿಮ ಚಂಪಾರಣ್ನ ಶಿಕಾರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ, ತನ್ನನ್ನು ಬಂಧಿಸುವಂತೆ ಪೊಲೀಸರಿಗೆ ಕರೆ ಮಾಡಿ ಅವಾಜ್ ಹಾಕಿದ್ದ. ಆರೋಪಿ ಅಮರೇಶ್ ಕುಮಾರ್ ಸಿಂಗ್ ಬಂಧಿತ.
ಈತ ಪೊಲೀಸ್ ಠಾಣೆ ಸಂಖ್ಯೆಗೆ ಕರೆ ಮಾಡಿ, ನಾನು ಪತ್ರಕರ್ತ, ನಾನು ಕುಡಿದಿದ್ದೇನೆ, ನಿಮಗೆ ಧಮ್ ಇದ್ರೆ ಬಂಧಿಸಿ ಎಂದು ಕರೆಯಲ್ಲಿ ಹೇಳಿದ್ದ. ಕಾರ್ಯಪ್ರವೃತ್ತರಾದ ಪೊಲೀಸರು, ಆತನ ಮನೆಗೆ ಹೋಗಿ ಬಂಧಿಸಿದ್ದಾರೆ. ಈ ಬಗ್ಗೆ ಶಿಕಾರ್ಪುರ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.