ಪಾಟ್ನಾ:ಬಿಹಾರದಲ್ಲಿ ಮದ್ಯ ನಿಷೇಧದ ನಡುವೆಯೂ ಜನರು ಅಕ್ರಮವಾಗಿ ಸೇವನೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದಕ್ಕಿಂತಲೂ ಮುಖ್ಯವಾಗಿ, ವಿಡಿಯೋದಲ್ಲಿ ಮದ್ಯ ಸೇವನೆ ಮಾಡಿರುವ ಮಂದಿಯ ಪರೀಕ್ಷೆಯನ್ನು ಖಚಿತಪಡಿಸುವಿಕೆಗೆ ನಡೆಸಿರುವ ತಂತ್ರ ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಪೂರ್ವ ಚಂಪಾರಣ್ನ ಉಪವಿಭಾಗೀಯ ಆಸ್ಪತ್ರೆಯ ವೈದ್ಯರು, ಆರೋಪಿಗಳು ಮದ್ಯ ಸೇವನೆ ಮಾಡಿದ್ದಾರೋ ಇಲ್ಲವೋ ಎಂಬುದರ ಪರೀಕ್ಷೆಗೆ ಪೇಪರ್ ಕೋನ್ ಬಳಕೆ ಮಾಡಿ ಗಮನ ಸೆಳೆದಿದ್ದಾರೆ. (ಸಾಮಗ್ರಿಗಳನ್ನು ಕಟ್ಟಲು ಬಳಕೆ ಮಾಡುವ ಪೇಪರ್ ಆಕೃತಿ)
ಪ್ರಕರಣದ ವಿವರ: ಬಿಹಾರದ ಅಬಕಾರಿ ಕಾಯ್ದೆ ಅಡಿ 2016ರಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟ ಮತ್ತು ಸೇವನೆ ನಿಷೇಧಿಸಲಾಗಿದೆ. ಈ ನಡುವೆಯೂ ಕೆಲವು ಅಕ್ರಮ ಮದ್ಯ ಸಾಗಾಟ ಮತ್ತು ಸೇವನೆ ಪ್ರಕರಣಗಳು ಕಂಡುಬಂದಿದ್ದು, ಇವು ಜೈಲು ಶಿಕ್ಷೆಯ ಅಪರಾಧವಾಗಿದೆ.
ಈ ನಿಷೇಧದ ನಡುವೆಯೂ ಅಕ್ಟೋಬರ್ 30ರಂದು 11 ಮಂದಿ ಮದ್ಯ ಸೇವನೆ ಮಾಡಿರುವ ಪ್ರಕರಣ ದಾಖಲಾಗಿದೆ. ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಮದ್ಯ ಪತ್ತೆ ಮಾಡುವ ಉಸಿರು ವಿಶ್ಲೇಷಣೆ ಸಾಧನೆ ಅಥವಾ ರಕ್ತ ಪರೀಕ್ಷೆ ಸಾಧನೆ ಇಲ್ಲದೇ ಇರುವ ಕಾರಣ ವೈದ್ಯರು, ಪೇಪರ್ ಅನ್ನು ಕೋನ್ ರೀತಿ ಮಾಡಿ ಅದನ್ನು ಊದುವಂತೆ ತಿಳಿಸಿದ್ದಾರೆ. ಈ ಪೇಪರ್ನಲ್ಲಿನ ವಾಸನೆಯನುಸಾರ ಅವರು ಕುಡಿದಿದ್ದಾರಾ, ಇಲ್ಲವಾ ಎಂದು ಪರೀಕ್ಷೆಗೆ ಮುಂದಾಗಿದ್ದಾರೆ.
ಈ ಪರೀಕ್ಷೆ ಮಾದರಿಯಲ್ಲಿ 9 ಮಂದಿ ಮದ್ಯ ಸೇವನೆ ಮಾಡಿರುವುದು ಕಂಡುಬಂದಿದೆ. ವೈದ್ಯಕೀಯ ಪರೀಕ್ಷೆ ಆಧಾರದ ಮೇಲೆ ರೆಕ್ಸುಲಾ ಪೊಲೀಸರುವ ಆರೋಪಿಗಳನ್ನು ಉಪ ವಿಭಾಗೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.