ಅರೇರಿಯಾ(ಬಿಹಾರ):ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದು, ಅಂತ್ಯ ಸಂಸ್ಕಾರ ನಡೆಸಲು ಯಾರೂ ಸಹ ಮುಂದೆ ಬಾರದಂತಹ ಘಟನೆ ನಡೆಯುತ್ತಿವೆ. ಬಿಹಾರದಲ್ಲಿ ಸದ್ಯ ಅಂತಹ ಮತ್ತೊಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಬಿಹಾರದ ಅರೇರಿಯಾಯದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ತಾಯಿಯ ಅಂತ್ಯಕ್ರಿಯೆಯನ್ನ ಮಗಳು ನಡೆಸಿದ್ದಾಳೆ. ಅಂತ್ಯಕ್ರಿಯೆಗೋಸ್ಕರ ಗುಂಡಿ ತಗೆಯಲು ಹಣ ಇಲ್ಲದ ಕಾರಣ ಖುದ್ದಾಗಿ ತಾನೇ ಗುಂಡಿ ಅಗೆದು ಅಂತಿಮ ಸಂಸ್ಕಾರ ನಡೆಸಿದ್ದಾಳೆ.
ಕೋವಿಡ್ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳು ರಾಣಿಗಂಜ್ನ ಬಿಶಾನ್ಪುರ್ ಪಂಚಾಯತ್ನಲ್ಲಿ ಈ ಘಟನೆ ನಡೆದಿದ್ದು, ಕೊರೊನಾ ಸೋಂಕಿನಿಂದಾಗಿ ಕಳೆದ ನಾಲ್ಕು ದಿನಗಳ ಹಿಂದೆ ತಂದೆ ಸಾವನ್ನಪ್ಪಿದ್ದನು. ಇದೀಗ ತಾಯಿ ಸಹ ತೀರಿಕೊಂಡಿದ್ದು, ಮೂರು ಮಕ್ಕಳು ಉಳಿದುಕೊಂಡಿದ್ದಾರೆ. ಇದೀಗ ಹಿರಿಯ ಮಗಳು ಪಿಪಿಇ ಕಿಟ್ ಧರಿಸಿ ತಾಯಿಯ ಅಂತ್ಯಕ್ರಿಯೆ ನಡೆಸಿದ್ದಾಳೆ.
ಇದನ್ನೂ ಓದಿ: ಮರಾಠ ಮೀಸಲಾತಿ ಕಾಯ್ದೆ ರದ್ದು: ಸುಪ್ರೀಂ ಆದೇಶದ ವಿರುದ್ಧ ಪರಿಶೀಲನಾ ಅರ್ಜಿ ಸಲ್ಲಿಸಿದ ಮಹಾರಾಷ್ಟ್ರ
ಮೃತ ತಾಯಿಯ ಹಿರಿಯ ಮಗಳು ಸೋನಿ ಕುಮಾರಿ ಈ ಕೆಲಸ ಮಾಡಿದ್ದು, ಅಂತ್ಯಕ್ರಿಯೆಯಲ್ಲಿ ಗ್ರಾಮದ ಯಾರೂ ಸಹ ಭಾಗಿಯಾಗಿಲ್ಲ. ತಂದೆ - ತಾಯಿ ಚಿಕಿತ್ಸೆಗೋಸ್ಕರ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ಅಂತಿಮ ವಿಧಿ ವಿಧಾನ ನಡೆಸಲು ಅವರ ಬಳಿ ಹಣವಿರಲಿಲ್ಲ. ಸೋನಿ ಕುಮಾರಿ ಕೇವಲ ಒಂದೇ ವಾರದಲ್ಲಿ 40 ವರ್ಷದ ತಂದೆ ಬೀರೇಂದ್ರ ಮೆಹ್ತಾ ಹಾಗೂ ತಾಯಿ 32 ವರ್ಷದ ಪ್ರಿಯಾಂಕಾ ದೇವಿ ಅವರನ್ನ ಕಳೆದುಕೊಂಡಿದ್ದಾರೆ. ಇದೀಗ ಮೂವರು ಮಕ್ಕಳು ಅನಾಥವಾಗಿದ್ದು, ಯಾರು ಸಾಕುತ್ತಾರೆಂಬ ಪ್ರಶ್ನೆ ಉದ್ಭವವಾಗಿದೆ.