ಸಮಸ್ತಿಪುರ: ಬಿಹಾರದಲ್ಲಿ ಪೊಲೀಸರು ಜನರ ಮೇಲೆ ದರ್ಪ ತೋರಿಸುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಮುಜಫರ್‌ಪುರಕ್ಕೆ ಹೊರಟಿದ್ದ ಯುವಕನೊಬ್ಬ ಬಸ್ ನಿಂತಿದ್ದ ವೇಳೆ ಗುಟ್ಕಾ ತಿಂದು ಉಗುಳಿದ್ದಾನೆ. ಆ ವೇಳೆ, ಸ್ವಲ್ಪ ಮುಂದೆ ಬಸ್ ಹೋಗಿದೆ.ಯುವಕ ಗುಟ್ಕಾ ಉಗುಳಿದ್ದು, ಬಸ್ ಬದಿಗೆ ನಿಂತಿದ್ದ ಹಾಕ್ಸ್ ತಂಡದ ಪೊಲೀಸ್ ಪೇದೆ ಮೇಲೆ ಬಿದ್ದಿದೆ.
ಇದರಿಂದ ಕುಪಿತಗೊಂಡ ಹಾಕ್ಸ್ ತಂಡದ ಪೇದೆ ಯುವಕನನ್ನು ತೀವ್ರ ಥಳಿಸಿದ ಮೇಲೆ ಐದು ಬಾರಿ ಉಗುಳುವಂತೆ ಪ್ರಚೋದಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಆದ ಬಳಿಕ ಎಸ್ಪಿ ವಿನಯ್ ತಿವಾರಿ, ಪೊಲೀಸರ ಹಾಕ್ಸ್ ತಂಡವನ್ನು ಅಮಾನತುಗೊಳಿಸಿದ್ದಾರೆ. ನಿಂತಿದ್ದ ಬಸ್ ಕೆಳಗಿದ್ದ ಖಾಲಿ ಜಾಗವನ್ನು ನೋಡಿ ಮುಜಫರ್‌ಪುರಕ್ಕೆ ತೆರಳುತ್ತಿದ್ದ ಯುವಕನೊಬ್ಬ ಗುಟ್ಕಾ ತಿಂದು ಉಗುಳಿರುವುದು ನಗರದ ಪಟೇಲ್ ಮೈದಾನದ ಗೋಲಂಬರ್ ಬಳಿ ನಡೆದಿದೆ. ಯುವಕ ಉಗುಳುತ್ತಿದ್ದಾಗ ನಿಂತಿದ್ದ ಬಸ್ನ್ನು ಕಂಡೆಕ್ಟರ್ ಸ್ವಲ್ಪ ಮುಂದಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಈ ವೇಳೆ ರಸ್ತೆ ಬದಿ ಕರ್ತವ್ಯ ನಿರತ ಪೊಲೀಸರ ಹಾಕ್ಸ್ ತಂಡದ ಪೇದೆಯೊಬ್ಬನ ದೇಹದ ಮೇಲೆ ಗುಟ್ಕಾ ಉಗುಳು ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಪೊಲೀಸ್ ಪೇದೆ ಬಸ್ ಹಿಂದೆ ಓಡಿ ಹೋಗಿ ಯುವಕನನ್ನು ಕೆಳಗಿಳಿಸಿ, ತೀವ್ರವಾಗಿ ಥಳಿಸಿದ್ದಾನೆ ಅಲ್ಲದೇ ಯುವಕನಿಂದ ಐದು ಬಾರಿ ಉಗುಳವಂತೆ ಮಾಡಿ, ಆತನಿಂದ ಅದನ್ನು ಬಾಯಿಂದ ನೆಕ್ಕುವಂತೆ ಮಾಡಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ.
ಸಂತ್ರಸ್ತ ಹೇಳಿದ್ದೇನು?:ಯುವಕ ಸಮಸ್ತಿಪುರದಿಂದ ಮುಜಾಫರ್‌ಪುರಕ್ಕೆ ಪ್ರಯಾಣಿಸುತ್ತಿದ್ದ. ಸಣ್ಣ ತಪ್ಪಿಗೆ ಪೊಲೀಸ್ ಪೇದೆ ಉಗ್ರ ಶಿಕ್ಷೆ ನೀಡಿದ್ದಾರೆ. ಹೀಗೆ ಪೊಲೀಸರಿಂದ ಅಮಾನವೀಯ ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಮುಜಾಫರ್‌ಪುರ ಜಿಲ್ಲೆಯ ನಿವಾಸಿ ಕಿಶೋರ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಸಮಸ್ತಿಪುರ ಬಸ್ ನಿಲ್ದಾಣದಿಂದ ತಾನೂ ಬಸ್ ಸೀಟು ಕಾಯ್ದಿದಿರಿಸಿದ ನಂತರ ಮುಜಫರ್‌ಪುರಕ್ಕೆ ಹೋಗುತ್ತಿದ್ದೆ, ಈ ಮಧ್ಯೆ ಈ ಘಟನೆ ಸಂಭವಿಸಿದೆ ಎಂದು ಸಂತ್ರಸ್ತ ತಿಳಿಸಿದ್ದಾನೆ.