ಕರ್ನಾಟಕ

karnataka

ETV Bharat / bharat

ಈಗಿನಿಂದಲೇ ಲೋಕಸಭೆ ಚುನಾವಣೆಗೆ ಒಗ್ಗೂಡುವ ಕಸರತ್ತು: ನಿತೀಶ್​ ದೆಹಲಿ ಪ್ರವಾಸ.. ಹಲವು ನಾಯಕರೊಂದಿಗೆ ಮಾತುಕತೆ

ಮುಂಬರುವ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಎಲ್ಲ ಪ್ರತಿಪಕ್ಷಗಳು ಒಗ್ಗೂಡಿಸುವ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ದೆಹಲಿಯಲ್ಲಿ ವಿವಿಧ ನಾಯಕರನ್ನು ಭೇಟಿ ಮಾಡಿ ಮಾತುಕತೆ ಕೈಗೊಂಡಿದ್ದಾರೆ.

bihar-cm-nitish-kumar-meets-left-parties-leaders-in-delhi
ನಿತೀಶ್​ ದೆಹಲಿ ಪ್ರವಾಸ... ಹಲವು ನಾಯಕರೊಂದಿಗೆ ಮಾತುಕತೆ

By

Published : Apr 13, 2023, 3:45 PM IST

ನವದೆಹಲಿ/ಪಾಟ್ನಾ:2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳು ಒಗ್ಗೂಡುವ ಕಸರತ್ತು ಆರಂಭವಾಗಿದೆ. ಈ ನಿಟ್ಟಿನಲ್ಲಿ ಜೆಡಿಯು ವರಿಷ್ಠ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ಮೂರು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸದಲ್ಲಿದ್ದಾರೆ. ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಇಂದು ಎಡಪಕ್ಷಗಳ ನಾಯಕರನ್ನು ನಿತೀಶ್​ ಕುಮಾರ್​ ಭೇಟಿ ಮಾಡಿದ್ದಾರೆ.

ದೆಹಲಿಯಲ್ಲಿ ಹಲವಾರು ಪಕ್ಷಗಳ ನಾಯಕರನ್ನು ಒಬ್ಬೊಬ್ಬರಾಗಿ ಬಿಹಾರ ಸಿಎಂ ಭೇಟಿ ಮಾಡುತ್ತಿದ್ದಾರೆ. ಖರ್ಗೆ ಹಾಗೂ ರಾಹುಲ್ ಅವರೊಂದಿಗೆ ಬುಧವಾರ ಸುದೀರ್ಘ ಚರ್ಚೆ ನಡೆಸಿದ್ದರು. ಆ ನಂತರ ಸಂಜೆ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಅವರನ್ನೂ ಭೇಟಿ ಮಾಡಿದ್ದರು. ಇಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರನ್ನು ನಿತೀಶ್​ ಭೇಟಿಯಾಗಿ ಸಮಾಲೋಚನೆ ನಡೆಸಿದರು.

ನಿತೀಶ್​ ಭೇಟಿ ಬಳಿಕ ಮಾತನಾಡಿದ ಸೀತಾರಾಂ ಯೆಚೂರಿ, ನಾವು ಇಂದು ಸಂವಿಧಾನವನ್ನು ಉಳಿಸಬೇಕಾಗಿದೆ. ಅದಕ್ಕಾಗಿ 2024ರ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಸೋಲಿಸಬೇಕು. ಇತರ ರಾಜಕೀಯ ಪಕ್ಷಗಳೊಂದಿಗೂ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಮಮತಾ ಬ್ಯಾನರ್ಜಿ ಒಟ್ಟು ಆಸ್ತಿ ಮೌಲ್ಯ ₹15 ಲಕ್ಷ; ಜಗನ್‌ ರೆಡ್ಡಿ ₹510 ಕೋಟಿ: ADR ವರದಿ

ಸಿಎಂ ನಿತೀಶ್​ ಅವರಿಗೆ ಮೈತ್ರಿ ಪಕ್ಷ ಜೆಡಿಯು ನಾಯಕರಾದ ಡಿಸಿಎಂ ತೇಜಸ್ವಿ ಯಾದವ್​ ಕೂಡ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಲು ನಿತೀಶ್ ರಾಷ್ಟ್ರಮಟ್ಟದಲ್ಲಿ ಈ ಮಾತುಕತೆ ನಡೆಸುತ್ತಿದ್ದಾರೆ. ಇಂದು ಇತರ ಕೆಲವು ಪಕ್ಷಗಳ ನಾಯಕರನ್ನೂ ಅವರು ಭೇಟಿ ಮಾಡಬಹುದು ಎಂದು ತಿಳಿದು ಬಂದಿದೆ. ನಿತೀಶ್​ ಭೇಟಿ ನಂತರ ರಾಹಲ್​, ಮೋದಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಪ್ರತಿಪಕ್ಷಗಳನ್ನು ಒಗ್ಗೂಡಿಸಬೇಕೆಂದು ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದರು.

ಅಲ್ಲದೇ, ''ಈ ಸೈದ್ಧಾಂತಿಕ ಹೋರಾಟದಲ್ಲಿ ಪ್ರತಿಪಕ್ಷಗಳ ಏಕತೆಯ ಕಡೆಗೆ ಇಂದು ಐತಿಹಾಸಿಕ ಹೆಜ್ಜೆ ಇಡಲಾಗಿದೆ. (ನಾವು) ಒಟ್ಟಿಗೆ ನಿಂತಿದ್ದೇವೆ, ಒಟ್ಟಾಗಿ ಹೋರಾಡುತ್ತೇವೆ - ಭಾರತಕ್ಕಾಗಿ!" ಎಂದು ರಾಹುಲ್ ಮಾಡಿದ್ದರು. ಮತ್ತೊಂದೆಡೆ, ಅರವಿಂದ್​ ಕೇಜ್ರಿವಾಲ್ ಸಹ, ನಿತೀಶ್ ಕುಮಾರ್ ಅವರ ಈ ಪ್ರಯತ್ನ ಶ್ಲಾಘನೀಯ. ಮೋದಿ ಸರ್ಕಾರವನ್ನು ಕಿತ್ತೊಗೆಯಲು ನಾವು ಅವರೊಂದಿಗಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದರು.

ನಿತೀಶ್​ ಬಗ್ಗೆ ಬಿಜೆಪಿ ವ್ಯಂಗ್ಯ: ಇದೇ ವೇಳೆ, ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಪ್ರತಿಪಕ್ಷಗಳ ಒಂದುಗೂಡಿಸುವ ಪ್ರಯತ್ನದಲ್ಲಿರುವ ನಿತೀಶ್​ ಕುಮಾರ್​ ಬಗ್ಗೆ ಆಡಳಿತಾರೂಢ ಬಿಜೆಪಿ ವ್ಯಂಗ್ಯವಾಡಿದೆ. ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ ಪ್ರತಿಕ್ರಿಯಿಸಿ, ಎಲ್ಲರೂ ಪ್ರಧಾನಮಂತ್ರಿ ಆಗಬೇಕು ಎಂದು ಬಯಸುತ್ತಾರೆ. ಇದರಲ್ಲಿ ನಿತೀಶ್​ ಕುಮಾರ್​ ಪ್ರಬಲವಾದ ಆಕಾಂಕ್ಷಿಯಾಗಿದ್ದಾರೆ. ಅದಕ್ಕಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿತೀಶ್​ ಖುಷಿಪಡಿಸಿ, ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಿದ್ದಾರೆ. ಆದರೆ, 2024ಕ್ಕೆ ಪ್ರಧಾನಿ ಹುದ್ದೆ ಖಾಲಿ ಇಲ್ಲ ಎಂಬುದನ್ನು ನಿತೀಶ್ ಕುಮಾರ್ ತಿಳಿದುಕೊಳ್ಳಬೇಕು. ಅವರು ತಮ್ಮ ರಾಜಕೀಯ ಅಧಃಪತನದತ್ತ ಸಾಗುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಕುಟುಕಿದ್ದಾರೆ.

ಅಮಿತ್​ ಶಾ ಭೇಟಿಯಾದ ಮಾಂಝಿ:ಮತ್ತೊಂದೆಡೆ, ಬಿಹಾರದ ಮಾಜಿ ಸಿಎಂ ಜಿತನ್​ ರಾಮ್​ ಮಾಂಝಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಮಿತ್​ ಶಾ ಭೇಟಿಗೂ ಮುನ್ನ ಮಾತನಾಡಿದ ಅವರು, ಅನೇಕ ವಿಷಯಗಳು ಇವೆ. ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Interview: ಮೋದಿ ಬದಲಾಗಿದ್ದಾರೆ, ಪ್ರಧಾನಿ ಹುದ್ದೆಗೆ ಯೋಗಿ ಸೂಕ್ತವಲ್ಲ; ಮಾಜಿ ರಾಜ್ಯಪಾಲ ಮಲ್ಲಿಕ್​

ABOUT THE AUTHOR

...view details