ಪಾಟ್ನಾ:ಬಿಹಾರದಲ್ಲಿ ಬಿಡುಗಡೆಯಾದ ಜಾತಿ ಗಣತಿಯಲ್ಲಿ ತೃತೀಯಲಿಂಗಿಗಳನ್ನು ಪ್ರತ್ಯೇಕ ಜಾತಿ ಪಟ್ಟಿಗೆ ಸೇರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿತು. ತೃತೀಯಲಿಂಗಿಗಳಿಗೆ ಸರ್ಕಾರದಿಂದ ಪ್ರತ್ಯೇಕ ಸವಲತ್ತುಗಳನ್ನು ನೀಡಬಹುದು. ಆದರೆ ಪ್ರತ್ಯೇಕ ಜಾತಿ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತು.
ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಅಕ್ಟೋಬರ್ 2 ರಂದು ಮಂಡಿಸಲಾಗಿದೆ. ವರದಿಯಲ್ಲಿ ತೃತೀಯಲಿಂಗಿಗಳ ಸಂಖ್ಯೆ 825 ಎಂದು ಹೇಳಲಾಗಿದ್ದು, ಅದನ್ನು ಕಲಂ 22ರಲ್ಲಿ ಸೇರಿಸಲಾಗಿದೆ. ಈ ವರದಿಯ ಪ್ರಕಾರ, ಬಿಹಾರದಲ್ಲಿ ತೃತೀಯಲಿಂಗಿಗಳ ಸಂಖ್ಯೆ ಶೇ.0.0006 ರಷ್ಟಿದೆ. ವರದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ತೃತೀಯಲಿಂಗಿಗಳು ಪ್ರತಿಭಟನೆ ನಡೆಸಿದ್ದರು. ತೃತೀಯಲಿಂಗಿಗಳ ಪರವಾಗಿ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.