ಪಾಟ್ನಾ(ಬಿಹಾರ): ವಿವಿಧ ವರ್ಗಗಳ ಮೀಸಲಾತಿ ಹೆಚ್ಚಿಸುವ ಪ್ರಸ್ತಾವನೆಯನ್ನು ಬಿಹಾರ ಸಚಿವ ಸಂಪುಟ ಅಂಗೀಕರಿಸಿದೆ. ಮಂಗಳವಾರ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ(ST), ಇತರೆ ಹಿಂದುಳಿದ ವರ್ಗ(OBC), ತೀರಾ ಹಿಂದುಳಿದ ವರ್ಗ(EWS), ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಯನ್ನು ಶೇ. 50ರಿಂದ 75ಕ್ಕೆ ಏರಿಕೆ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಅಧಿವೇಶನದಲ್ಲಿ ಮಂಡನೆಯಾದ ಜಾತಿ ಗಣತಿ ವರದಿ ಮೇಲಿನ ಚರ್ಚೆ ವೇಳೆ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಈಗ ನಡೆಯುತ್ತಿರುವ ಅಧಿವೇಶನದ ಸಂದರ್ಭ ವಿಧಾನಸಭೆಯಲ್ಲಿ ಮೀಸಲಾತಿ ಹೆಚ್ಚಳ ಮಸೂದೆ ಮಂಡಿಸಲಾಗುವುದು ಎಂದು ತಿಳಿಸಿದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಈ ಮೀಸಲಾತಿ ಹೆಚ್ಚಳದ ಬಗ್ಗೆ ನಿತೀಶ್ ಘೋಷಣೆ ಮಾಡಿದ್ದಾರೆ. ಈ ಮೀಸಲಾತಿ ಹೆಚ್ಚಳ ಪ್ರಸ್ತಾವನೆಯು ಇತರೆ ಹಿಂದುಳಿದ ವರ್ಗ(OBC) ಮತ್ತು ತೀರಾ ಹಿಂದುಳಿದ ವರ್ಗಗಳಿಗೆ(EWS) ಒಟ್ಟಾಗಿ ಶೇ.30ರಿಂದ 43ಕ್ಕೆ ಹೆಚ್ಚಳ ಮಾಡುವ ಪ್ರಸ್ತಾವನೆ ಹೊಂದಿದೆ. ಪರಿಶಿಷ್ಟ ಜಾತಿಗೆ ಶೇ. 16ರಿಂದ 20ರಷ್ಟು ಹೆಚ್ಚಳ ಮತ್ತು ಪರಿಶಿಷ್ಟ ಜಾತಿಗೆ ಶೇ.1ರಿಂದ 2ರಷ್ಟು ಏರಿಕೆ ಹಾಗೂ ತೀರಾ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಒದಗಿಸುತ್ತದೆ. ತೀರಾ ಹಿಂದುಳಿದ ವರ್ಗಗಳಿಗೆ ಈ ಹಿಂದೆಯೂ ಶೇ.10ರಷ್ಟೇ ಮೀಸಲಾತಿ ನೀಡಲಾಗಿತ್ತು.