ನವಾಡ (ಬಿಹಾರ):ಮದುವೆಯಾಗು ಎಂದು ಪೀಡಿಸುತ್ತಿದ್ದ ಅಪ್ರಾಪ್ತ ಗರ್ಭಿಣಿ ಗೆಳತಿಯನ್ನು ಯುವಕನೊಬ್ಬ ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟುಹಾಕಿದ ಘಟನೆ ಬಿಹಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಹಿನ್ನೆಲೆ:ಬಿಹಾರದ ನವಾದ ಜಿಲ್ಲೆಯ ರಾಜೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಬಾಲಕಿಯೊಂದಿಗೆ ಯುವಕನೊಬ್ಬ ಪ್ರೇಮ ಸಂಬಂಧ ಹೊಂದಿದ್ದು. ಇದೇ ವೇಳೆ ಆಕೆ ಗರ್ಭ ಧರಿಸಿದ್ದಾಳೆ. ತನ್ನನ್ನು ಮದುವೆಯಾಗು ಎಂದು ಕೇಳಿದ್ದಕ್ಕೆ ಕುಪಿತಗೊಂಡ ಯುವಕ ಆಕೆಯ ಮನವಿಯನ್ನು ತಿರಸ್ಕಾರ ಮಾಡಿದ್ದ. ಅಲ್ಲದೇ, ಆತನ ಕುಟುಂಬವೂ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಮಗಳು ಆರೋಪಿಯೊಂದಿಗೆ ಪ್ರೇಮಪಾಶದಲ್ಲಿ ಬಿದ್ದಿದ್ದು ಇತ್ತ ಪೋಷಕರಿಗೂ ತಿಳಿದಿರಲಿಲ್ಲ. ಆಕೆ ಗರ್ಭ ಧರಿಸಿದ ಬಳಿಕ ವಿಚಾರ ಬಯಲಾಗಿತ್ತು.
ಮದುವೆಯಾಗಲು ಕೋರಿದ್ದ ಬಾಲಕಿ:ಇನ್ನು, ತನ್ನನ್ನು ಪ್ರೀತಿಸಿ ಗರ್ಭವತಿಯನ್ನಾಗಿ ಮಾಡಿದ್ದಕ್ಕೆ ಮದುವೆಯಾಗಲು ಅಪ್ರಾಪ್ತೆ ಬೇಡಿಕೆ ಇಟ್ಟಿದ್ದಳು. ಇದು ಯುವಕನನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಮದುವೆಯಾಗಲು ಸಾಧ್ಯವಿಲ್ಲ ಎಂದು ಯುವಕ ಹಲವು ಬಾರಿ ಹೇಳಿದ್ದನಂತೆ. ಈ ಬಗ್ಗೆ ಹಲವು ಬಾರಿ ಇಬ್ಬರ ಮಧ್ಯೆ ವಾಗ್ವಾದವೂ ನಡೆದಿತ್ತು. ಆದರೆ, ಗರ್ಭಿಣಿ ಅಪ್ರಾಪ್ತೆ ಮಾತ್ರ ಮದುವೆಗೆ ಪಟ್ಟು ಹಿಡಿದಿದ್ದಳು. ಇದರಿಂದ ಆತ ಮಾಡಬಾರದ ಕೃತ್ಯ ಎಸಗಿದ್ದ.
ಓದಿ:ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆ!: ಅಧ್ಯಯನ