ಕರ್ನಾಟಕ

karnataka

ETV Bharat / bharat

Barack Obama statement: 'ದೇಶ ವಿಭಜನೆ' ಹೇಳಿಕೆ ಕೊಟ್ಟ ಒಬಾಮಾಗೆ ತೀವ್ರ ಮುಖಭಂಗ.. ಸಿ-ವೋಟರ್​ನಲ್ಲಿ ಬಹಿರಂಗ - Barack Obama

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾರ ಭಾರತ ವಿಭಜನೆ ಹೇಳಿಕೆ ಟೀಕೆಗೆ ಗುರಿಯಾಗಿದೆ. ಸಿ- ವೋಟರ್​ ನಡೆಸಿದ ಸಮೀಕ್ಷೆಯಲ್ಲಿ ಶೇ.52 ಕ್ಕೂ ಅಧಿಕ ಜನರು ಹೇಳಿಕೆ ವಿರುದ್ಧ ಮತ ಹಾಕಿದ್ದಾರೆ.

ಒಬಾಮಾ ದೇಶ ವಿಭಜನೆ
ಒಬಾಮಾ ದೇಶ ವಿಭಜನೆ

By

Published : Jun 24, 2023, 4:52 PM IST

ನ್ಯೂಯಾರ್ಕ್​:ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾರ 'ಭಾರತ ವಿಭಜನೆ' ಹೇಳಿಕೆ ವಿರುದ್ಧ ದೇಶದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ. ನೊಬೆಲ್​ ಶಾಂತಿ ಪುರಸ್ಕೃತ ಅಧ್ಯಕ್ಷರ ಈ ಹೇಳಿಕೆ ಕುರಿತಂತೆ ಸಿ-ವೋಟರ್​ ನಡೆಸಿದ ಸಮೀಕ್ಷೆಯಲ್ಲಿ ಶೇ.52ಕ್ಕೂ ಅಧಿಕ ಜನರು ಸರ್ಕಾರ ಇದನ್ನು ಖಂಡಿಸಬೇಕು ಎಂದು ಕೋರಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 4 ದಿನಗಳ ಅಮೆರಿಕ ಪ್ರವಾಸದ ಸಂದರ್ಭದಲ್ಲಿ, ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅವರ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದು ಬರಾಕ್​ ಒಬಾಮಾ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದಕ್ಕೆ ಭಾರತ ಸರ್ಕಾರ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಈ ಹೇಳಿಕೆಗೆ ಭಾರತೀಯರಲ್ಲಿ ಆಕ್ರೋಶವಿದೆ ಎಂಬುದು ಸಿ-ವೋಟರ್​ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಒಬಾಮಾ ಹೇಳಿದ್ದೇನು?:ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಅವರು ಪ್ರಧಾನಿ ಮೋದಿ ಅವರ ಐತಿಹಾಸಿಕ ಅಮೆರಿಕ ಪ್ರವಾಸದ ವೇಳೆಯೇ ದೇಶದ ವಿರುದ್ಧ ಹೇಳಿಕೆ ನೀಡಿದ್ದರು. ಭಾರತದಲ್ಲಿ ಜನಾಂಗೀಯ ಅಲ್ಪಸಂಖ್ಯಾತರು ಮತ್ತು ಮುಸ್ಲಿಮರನ್ನು ರಕ್ಷಿಸದಿದ್ದರೆ ಭಾರತವು ವಿಭಜನೆಯಾಗುವ ಅಪಾಯವಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ನಡೆಸಿದ ಸಂದರ್ಶನದಲ್ಲಿ ಹೇಳಿದ್ದರು.

ಮಾಧ್ಯಮಗಳು, ರಾಜಕಾರಣಿಗಳು, ಮಾನವ ಹಕ್ಕುಗಳು ಕಾರ್ಯಕರ್ತರು ಮತ್ತು ವಾಕ್ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರದಂತೆ ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರುವಂತೆ ಅಧ್ಯಕ್ಷ ಜೋ ಬೈಡನ್ ಅವರನ್ನು ಇದೇ ವೇಳೆ ಒತ್ತಾಯಿಸಿದ್ದರು.

ಸಮೀಕ್ಷೆಯಲ್ಲಿ ಜನ ಮತವೇನು?:CVoter ಸ್ನ್ಯಾಪ್ ಪೋಲ್ ಮೂಲಕ ಭಾರತ ಸರ್ಕಾರವು ಈ ಹೇಳಿಕೆಯನ್ನು ಖಂಡಿಸಬೇಕೇ? ಎಂದು ಪ್ರಶ್ನೆ ಮುಂದಿಟ್ಟಿತ್ತು. ಪ್ರತಿ 10ರಲ್ಲಿ ಐದಕ್ಕೂ ಹೆಚ್ಚು ಮಂದಿ ಒಬಾಮಾ ಮಾಡಿರುವ ಟೀಕೆಗಳನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೇ, ಮೂರನೇ ಒಂದು ಭಾಗದಷ್ಟು ಜನರು ಕೇಂದ್ರವು ಈ ಹೇಳಿಕೆಯನ್ನು ನಿರ್ಲಕ್ಷಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕುತೂಹಲಕಾರಿ ವಿಷಯವೆಂದರೆ, ವಿರೋಧ ಪಕ್ಷಗಳನ್ನು ಬೆಂಬಲಿಸುವ 47 ಪ್ರತಿಶತದಷ್ಟು ಜನರು ಬಹುಮತದ ಸಂಖ್ಯೆಯನ್ನು ಒಪ್ಪುತ್ತಾರೆ. ಆದರೆ, 38 ಪ್ರತಿಶತ ಜನರು ಹೇಳಿಕೆ ನಿರ್ಲಕ್ಷಿಸಲು ಹೇಳಿದ್ದಾರೆ.

ಮೋದಿ ಮಹತ್ವದ ಪ್ರವಾಸ:ಪ್ರಧಾನಿ ಮೋದಿ ಅವರು 4 ದಿನಗಳ ಅಮೆರಿಕ ಪ್ರವಾಸವನ್ನು ಸಾರ್ಥಕವಾಗಿ ಮುಗಿಸಿದ್ದಾರೆ. ರಕ್ಷಣೆ, ಟೆಲಿಕಾಂ, ಸೆಮಿ ಕಂಡಕ್ಟರ್, ಇಂಧನ, ಶಿಕ್ಷಣ ಮತ್ತು ಬಾಹ್ಯಾಕಾಶ ಪರಿಶೋಧನೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವು ಹೊಸತನಗಳಿಗೆ ಸಂಬಂಧಿಸಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.

ಅಧ್ಯಕ್ಷ ಜೋ ಬೈಡನ್ ಅವರು ಶ್ವೇತಭವನದಲ್ಲಿ ಪ್ರಧಾನಿ ಮೋದಿ ಅವರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದರು. ಇದಲ್ಲದೇ, ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಎರಡನೇ ಬಾರಿಗೆ ಭಾಷಣ ಮಾಡಿದ ಮೊದಲ ಭಾರತೀಯ ನಾಯಕ ಎಂಬ ಅಭಿದಾನಕ್ಕೆ ಪಾತ್ರರಾದರು. ಒಂದೇ ದಿನದಲ್ಲಿ 20 ಉದ್ಯಮಿಗಳೊಂದಿಗೆ ಸರಣಿ ಸಭೆ ನಡೆಸಿದರು. ಇದಾದ ಬಳಿಕ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್‌ನಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ:ಅಮೆರಿಕದಲ್ಲೇ ಹೆಚ್​1ಬಿ ವೀಸಾ ನವೀಕರಣ: ಪ್ರಧಾನಿ ಮೋದಿ ಮಹತ್ವದ ಘೋಷಣೆ

ABOUT THE AUTHOR

...view details