ನವದೆಹಲಿ: ಇಸ್ಲಾಮಿಕ್ ಸಂಸ್ಥೆ ಪಿಎಫ್‌ಐಗೆ 80-G ಅಡಿ ನೀಡಲಾಗಿದ್ದ ತೆರಿಗೆ ವಿನಾಯಿತಿಯನ್ನು ಆದಾಯ ತೆರಿಗೆ ಇಲಾಖೆ ರದ್ದುಪಡಿಸಿದೆ. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 12 ಎಎ (3) ರ ಅಡಿ ನೀಡಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ನೋಂದಣಿಯನ್ನು ಇತ್ತೀಚೆಗೆ ರದ್ದುಗೊಳಿಸಲಾಯಿತು.
ಈ ವಿಶೇಷ ಸೌಲಭ್ಯವನ್ನು 2012ರ ಆಗಸ್ಟ್ನಲ್ಲಿ ಪಿಎಫ್‌ಐಗೆ ನೀಡಲಾಗಿತ್ತು. 2016-17ರ ಮೌಲ್ಯಮಾಪನ ವರ್ಷದಿಂದ ಜಾರಿಗೆ ಬರುವಂತೆ ಪಿಎಫ್‌ಐಗೆ ತೆರಿಗೆ ಪ್ರಯೋಜನವನ್ನು ರದ್ದುಗೊಳಿಸಲಾಗಿದೆ. ಸದ್ಯ ಪಿಎಫ್‌ಐ ಕಡ್ಡಾಯವಾಗಿ ತೆರಿಗೆ ಪಾವತಿಸಬೇಕಿದೆ. ಅದಕ್ಕೆ ದೇಣಿಗೆ ನೀಡುವವರು ಕೂಡ ತೆರಿಗೆಯಿಂದ ವಿನಾಯಿತಿ ಪಡೆಯುವುದಿಲ್ಲ. ಈ ಆದೇಶದ ವಿರುದ್ಧ ಪಿಎಫ್‌ಐ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯಿದೆ. 2006ರಲ್ಲಿ ಕೇರಳದಲ್ಲಿ ರೂಪುಗೊಂಡ ಈ ಸಂಸ್ಥೆ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯಂತಹ ಕೇಂದ್ರ ಏಜೆನ್ಸಿಗಳ ಸದಸ್ಯರು ಸಹ ಈ ಸಂಸ್ಥೆ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಐಟಿ ಕಾಯ್ದೆಯ ಸೆಕ್ಷನ್ 12 ಎ ಅಡಿ ಮತ್ತು ಅದೇ ಕಾನೂನಿನಡಿ ಸೆಕ್ಷನ್ 80 ಜಿ ಅಡಿ ವ್ಯಾಖ್ಯಾನಿಸಿರುವಂತೆ ಪಿಎಫ್‌ಐ ಚಾರಿಟಬಲ್ ಸಂಸ್ಥೆ ಎಂಬ ಟ್ಯಾಗ್ ಅನ್ನು ಇಲಾಖೆ ತೆಗೆದುಕೊಂಡಿದೆ. 12 ಎ/12 ಎಎ ಕಾಯ್ದೆಯು ಧಾರ್ಮಿಕ ಟ್ರಸ್ಟ್‌ಗಳ ಆದಾಯಕ್ಕೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ನೀಡುತ್ತದೆ. ಸೆಕ್ಷನ್ 80 ಜಿ ಧಾರ್ಮಿಕ ಸಂಸ್ಥೆಗೆ ದೇಣಿಗೆ ನೀಡುವ ವ್ಯಕ್ತಿಯ ಆದಾಯ ತೆರಿಗೆಯನ್ನು ಕಡಿತಗೊಳಿಸುತ್ತದೆ. ಐಟಿ ಇಲಾಖೆ ಪ್ರಕಾರ ಪಿಎಫ್‌ಐ ನ ಮೌಲ್ಯಮಾಪಕ ಟ್ರಸ್ಟ್ ಅಥವಾ ಸಂಸ್ಥೆಯ ಜ್ಞಾಪಕ ಪತ್ರದ (ಎಂಒಎ) ಪ್ರಕಾರ ತನ್ನ ಚಟುವಟಿಕೆಗಳನ್ನು ನಿರ್ವಹಿಸುತ್ತಿಲ್ಲ. ಇದು ಸೆಕ್ಷನ್ 13 (1 ಬಿ)ನ ನಿಬಂಧನೆಗಳನ್ನು ಉಲ್ಲಂಘಿಸಿದೆ.