ಅಹಮದಾಬಾದ್ (ಗುಜರಾತ್) :ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ 2023ರ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಸೆಂಟ್ರಲ್ ಮತ್ತು ಅಹಮದಾಬಾದ್ ನಿಲ್ದಾಣದ ನಡುವೆ ವಿಶೇಷ ದರದಲ್ಲಿ 2 ಸೂಪರ್‌ಫಾಸ್ಟ್ ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ಪಶ್ಚಿಮ ರೈಲ್ವೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚರಿಸುವ ಈ ವಿಶೇಷ ರೈಲಿನ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಪಿಆರ್‌ಒ ಜಿತೇಂದ್ರ ಜಯಂತ್, "ಸೂಪರ್‌ಫಾಸ್ಟ್ ವಿಶೇಷ ರೈಲು ಭಾರತ-ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಮುಂಬೈ ಸೆಂಟ್ರಲ್‌ನಿಂದ ಅಹಮದಾಬಾದ್‌ಗೆ ಸಂಚರಿಸಲಿದೆ. ರೈಲು ಸಂಖ್ಯೆ 09013 ಮತ್ತು 09014 ಸಂಖ್ಯೆಯ ಒಟ್ಟು ಎರಡು ರೈಲುಗಳನ್ನು ಬಿಡಲಾಗುತ್ತಿದೆ ಎಂದು ಹೇಳಿದರು.
ಈ 2 ರೈಲುಗಳ ಬುಕಿಂಗ್ ಅನ್ನು 12 ಅಕ್ಟೋಬರ್ 2023 ರಿಂದ ಎಲ್ಲ PRS ಕೌಂಟರ್‌ಗಳಲ್ಲಿ ಮತ್ತು IRCTC ವೆಬ್‌ಸೈಟ್‌ನಲ್ಲಿ ತೆರೆಯಲಾಗುತ್ತದೆ. ವಿಶೇಷ ದರದಲ್ಲಿ ವಿಶೇಷ ರೈಲುಗಳಾಗಿ ಓಡಿಸಲಾಗುವುದು. ಆದ್ದರಿಂದ, ಈ ರೈಲಿನಲ್ಲಿ ನಿಲುಗಡೆ ಸಮಯ ಮತ್ತು ಪ್ರಯಾಣದ ಬಗ್ಗೆ ವಿವರವಾದ ಮಾಹಿತಿಗಾಗಿ ಪ್ರಯಾಣಿಕರು www.enquiry ವೆಬ್ ಸೈಟ್ಗೆ ಭೇಟಿ ನೀಡಬೇಕು. Indianrail.gov.in ನಲ್ಲಿ ಸಹ ಚೆಕ್ ಮಾಡಬಹುದು. ಭಾರತ-ಪಾಕಿಸ್ತಾನ ನಡುವಿನ ಈ ಪಂದ್ಯ ವೀಕ್ಷಿಸಲು ಜನಸಾಗರವೇ ಹರಿದು ಬರಲು ಮುಂದಾಗಿದ್ದು, ರೈಲ್ವೆ ಇಲಾಖೆ ಕೈಗೊಂಡಿರುವ ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.