ಸೂರತ್:ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ, ನಗರ ಹಾಗೂ ಗ್ರಾಮೀಣ ಭಾಗದ ಗೃಹ ಬಳಕೆ ಗ್ರಾಹಕರಿಗೆ ಪ್ರತಿ ತಿಂಗಳು 300 ಯುನಿಟ್ ವಿದ್ಯುತ್ ಉಚಿತ ನೀಡಲಾಗುವುದು ಎಂದು ದೆಹಲಿ ಸಿಎಂ ಹಾಗೂ ಆಪ್ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 31, 2021ರವರೆಗೆ ಬಾಕಿ ಉಳಿದಿರುವ ವಿದ್ಯುಚ್ಛಕ್ತಿ ಬಿಲ್ಗಳನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದರು. ಎಲ್ಲ ಗೃಹಬಳಕೆ ಗ್ರಾಹಕರಿಗೆ 300 ಯುನಿಟ್ ವಿದ್ಯುಚ್ಛಕ್ತಿ ಉಚಿತವಾಗಿ ನೀಡಲಿದ್ದೇವೆ. ನಗರ ಹಾಗೂ ಗ್ರಾಮಗಳಲ್ಲಿ ವಾರದ ಎಲ್ಲ ದಿನಗಳ 24 ಗಂಟೆಯೂ ವಿದ್ಯುತ್ ಪೂರೈಕೆಯಾಗುವಂತೆ ಮಾಡುತ್ತೇವೆ ಎಂದು ಕೇಜ್ರಿವಾಲ್ ತಿಳಿಸಿದರು.
ಉಚಿತ ವಿದ್ಯುತ್ ಯೋಜನೆಯನ್ನು ಟೀಕೆ ಮಾಡಿರುವ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಯವರು ಉಚಿತ ವಿದ್ಯುತ್ಗೆ ವಿರೋಧಿಸುತ್ತಾರೆ. ದೆಹಲಿಯಲ್ಲಿರುವ ಬಿಜೆಪಿಯವರು ತಮಗೆ ಉಚಿತ ವಿದ್ಯುತ್ ಬೇಡವೆಂದರೆ ಅವರು ಹಾಗಂತ ಬರೆದುಕೊಡುವ ಆಯ್ಕೆಯನ್ನು ನಾವು ಅವರಿಗೆ ನೀಡಿದ್ದೇವೆ ಎಂದರು.
ಚುನಾವಣೆಗೂ ಮುನ್ನ ಅನೇಕ ಪಕ್ಷಗಳು ಸಂಕಲ್ಪ ಪತ್ರದೊಂದಿಗೆ ನಿಮ್ಮಲ್ಲಿಗೆ ಬರುತ್ತವೆ. ಚುನಾವಣೆಗಳ ನಂತರ ನೀವು ಅವರಿಗೆ 15 ಲಕ್ಷ ರೂಪಾಯಿ ಕೇಳಿದರೆ ಅದೆಲ್ಲ ಚುನಾವಣೆ ಗಿಮಿಕ್ ಅಂದು ಸುಮ್ಮನಾಗ್ತಾರೆ. ನಾವು ಗಿಮಿಕ್ ಮಾಡಲ್ಲ. ಏನು ಹೇಳ್ತೀವೋ ಅದನ್ನೇ ಮಾಡ್ತೇವೆ ಎಂದು ಕೇಜ್ರಿವಾಲ್ ಭರವಸೆ ನೀಡಿದರು.
ಇದನ್ನು ಓದಿ:ದುರಹಂಕಾರ, ಸರ್ವಾಧಿಕಾರದ ವಿರುದ್ಧ ಸತ್ಯ ಜಯಗಳಿಸಲಿದೆ': ರಾಹುಲ್ ಗಾಂಧಿ ಟ್ವೀಟ್