ಕರ್ನಾಟಕ

karnataka

ETV Bharat / bharat

ವಿಶ್ವಭಾರತಿ ವಿವಿ ಮಾಜಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ವಿಚಾರಣೆ

ವಿಶ್ವಭಾರತಿ ಮಾಜಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಹಲವು ದೂರುಗಳು ಬಂದಿದ್ದು, ಅದರಲ್ಲಿ ಪ್ರಮುಖ ಆರು ಪ್ರಕರಣಗಳನ್ನು ಶಾಂತಿನಿಕೇತನ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ವಿಶ್ವಭಾರತಿ ಮಾಜಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ
ವಿಶ್ವಭಾರತಿ ಮಾಜಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ

By ETV Bharat Karnataka Team

Published : Nov 20, 2023, 7:55 PM IST

ಬೋಲ್ಪುರ್ (ಪಶ್ಚಿಮ ಬಂಗಾಳ) :ವಿಶ್ವಭಾರತಿ ವಿವಿಯ ಮಾಜಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರನ್ನು ಶಾಂತಿನಿಕೇತನ ಠಾಣೆ ಪೊಲೀಸರು ಸೋಮವಾರ ಬೆಳಗ್ಗೆ ಸುಮಾರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಶಾಂತಿನಿಕೇತನ ಠಾಣೆಯ ಒಸಿ ಕಸ್ತೂರಿ ಮುಖರ್ಜಿ ನೇತೃತ್ವದಲ್ಲಿ ಪೊಲೀಸರು ಚಕ್ರವರ್ತಿ ಅವರನ್ನು ಪುರ್ಬಿತಾ ನಿವಾಸದಲ್ಲಿ ವಿಚಾರಗೊಳಪಡಿಸಿದ್ದು, ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳ ತಿಳಿಸಿವೆ.

ವಿಶ್ವಭಾರತಿ ವಿವಿ ಉಪಕುಲಪತಿಯಾಗಿ ಬಿದ್ಯುತ್ ಚಕ್ರವರ್ತಿ ಅವರ ಅಧಿಕಾರಾವಧಿಯು ನವೆಂಬರ್ 8 ರಂದು ಮುಕ್ತಾಯಗೊಂಡಿತ್ತು. ಶಾಂತಿನಿಕೇತನ ಪೊಲೀಸ್ ಠಾಣೆಯಲ್ಲಿ ಚಕ್ರವರ್ತಿ ವಿರುದ್ಧ ಹಲವಾರು ದೂರುಗಳು ದಾಖಲಿಸಲಾಗಿವೆ. ಈ ದೂರುಗಳ ಆಧಾರದ ಮೇಲೆ ಒಟ್ಟು 6 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣಗಳ ಸಂಬಂಧ ರಕ್ಷಣೆ ಕೋರಿ ಬಿದ್ಯುತ್ ಚಕ್ರವರ್ತಿ ಕಲ್ಕತ್ತಾ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆಗ ನ್ಯಾಯಾಲಯ ಚಕ್ರವರ್ತಿ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಒಂದು ಪ್ರಕರಣಕ್ಕೆ ಒಂದು ಗಂಟೆಯಂತೆ ಮೂರು ಪ್ರಕರಣಗಳಲ್ಲಿ ಚಕ್ರವರ್ತಿ ಅವರನ್ನು ಸುಮಾರು 3 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ.

ಅಧಿಕಾರಿದ್ದಲ್ಲಿದ್ದಾಗ ಬಂಗಾಳಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಚಕ್ರವರ್ತಿ, ದುರ್ಗಾ ಪೂಜೆಯ ಬಗ್ಗೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಶಾಂತಿನಿಕೇತನದ ಟೊಟೊ ಚಾಲಕರಿಗೆ ಸಹ ಕಿರುಕುಳ, ರವೀಂದ್ರನಾಥ ಟ್ಯಾಗೋರ್ ಅವರನ್ನು ವಿಶ್ವ ಪರಂಪರೆಯ ಫಲಕದಿಂದ ತೆಗೆದು ಹಾಕಿರುವುದು, ಅಲ್ಲದೇ ಮಹರ್ಷಿ ದೇವೇಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ಶಾಂತಿನಿಕೇತನ ಟ್ರಸ್ಟ್‌ನ ಸ್ಥಳದಲ್ಲಿ ವಿವಾದಾತ್ಮಕ ಫಲಕವನ್ನು ಇರಿಸಿರುವ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಮೇಲೆ ಕೂಡ ಹಲ್ಲೆ ಮಾಡಿ ಅವರನ್ನು ಭೂಗಳ್ಳ ಎಂದು ಆರೋಪಿಸಿದ್ದರು ಎಂಬ ಆರೋಪ ಇವರ ಮೇಲಿದೆ. ಆದರಿಂದ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿದ್ಯುತ್ ಚಕ್ರವರ್ತಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳ ಮೇಲೆ ಕುಲಪತಿಗಳು ಕಲ್ಲು ತೂರಾಟ : ಇನ್ನು ಇದೇ ವರ್ಷ ಫೆಬ್ರವರಿ ತಿಂಗಳ ಸಂದರ್ಭದಲ್ಲಿ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಸುಮಾರು 21 ದಿನಗಳ ತನಕ ವಿದ್ಯಾರ್ಥಿಗೆ ಪ್ರವೇಶ ನೀಡದ ಹಾಗೂ ಹಲವು ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸಲು ಅವಕಾಶ ನೀಡುತಿಲ್ಲ ಎಂದು ಆರೋಪಿಸಿ ಉಪಕುಲಪತಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಭದ್ರತಾ ಸಿಬ್ಬಂದಿ ಮತ್ತು ಧರಣಿನಿರತ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿತ್ತು. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು..

ಬಳಿಕ ವಿವಿ ಕೇಂದ್ರ ಕಚೇರಿಗೆ ಆಗಮಿಸಿದ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಕುಲಪತಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಪೊಲೀಸರು ಸ್ಥಳದಲ್ಲಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದರು.

ಇದನ್ನೂ ಓದಿ :ವಿಶ್ವಕಪ್ ಫೈನಲ್ 2023 : ಮ್ಯಾಕ್ಸ್‌ವೆಲ್ ಪತ್ನಿಗೆ ಬಂತು ದ್ವೇಷಪೂರಿತ ಸಂದೇಶ

ABOUT THE AUTHOR

...view details