ಕರ್ನಾಟಕ

karnataka

ETV Bharat / bharat

ಟಿ-20 ಪವರ್​ ಪ್ಲೇ: ಅತಿ ಹೆಚ್ಚು ವಿಕೆಟ್ ಪಡೆದ​ ಭುವನೇಶ್ವರ್ ಕುಮಾರ್

ತಲಾ 33 ವಿಕೆಟ್ ಪಡೆದ ಮಾಜಿ ವೆಸ್ಟ್ ಇಂಡೀಸ್ ಸ್ಪಿನ್ನರ್ ಸ್ಯಾಮುಯೆಲ್ ಬಾದ್ರೀ ಮತ್ತು ನ್ಯೂಜಿಲ್ಯಾಂಡ್​​ ವೇಗದ ಬೌಲರ್ ಟಿಮ್ ಸೌತೀ ಅವರನ್ನು ಭುವನೇಶ್ವರ್ ಕುಮಾರ್ ಹಿಂದಿಕ್ಕಿದ್ದಾರೆ.

Bhuvneshwar Kumar records most wickets in powerplay in T20I history
Bhuvneshwar Kumar records most wickets in powerplay in T20I history

By

Published : Jun 27, 2022, 12:04 PM IST

ಡಬ್ಲಿನ್ (ಐರ್ಲೆಂಡ್): ಭಾರತೀಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಟಿ-20 ಕ್ರಿಕೆಟ್ ಪವರ್ ಪ್ಲೇ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.

ಇಲ್ಲಿನ ಮಾಲಾಹೈಡ್ ಕ್ರಿಕೆಟ್ ಕ್ಲಬ್​ನಲ್ಲಿ ಭಾನುವಾರ ನಡೆದ ಐರ್ಲೆಂಡ್​ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಈ ದಾಖಲೆ ಮಾಡಿದ್ದಾರೆ. ಇನ್ನಿಂಗ್ಸ್​ನ 5ನೇ ಎಸೆತದಲ್ಲಿ ಐರ್ಲೆಂಡ್​ ಕ್ಯಾಪ್ಟನ್ ಆ್ಯಂಡ್ರೂ ಬಾಲ್ಬಿರ್ನಿ ಅವರನ್ನು ಔಟ್ ಮಾಡುವ ಮೂಲಕ ಟಿ-20 ಪವರ್ ಪ್ಲೇ ನಲ್ಲಿ 34ನೇ ವಿಕೆಟ್ ಪಡೆದು ಐತಿಹಾಸಿಕ ದಾಖಲೆ ಮಾಡಿದರು.

ತಲಾ 33 ವಿಕೆಟ್ ಪಡೆದ ಮಾಜಿ ವೆಸ್ಟ್ ಇಂಡೀಸ್ ಸ್ಪಿನ್ನರ್ ಸ್ಯಾಮುಯೆಲ್ ಬಾದ್ರೀ ಮತ್ತು ನ್ಯೂಜಿಲ್ಯಾಂಡ್​ ವೇಗದ ಬೌಲರ್ ಟಿಮ್ ಸೌತೀ ಅವರನ್ನು ಈ ಮೂಲಕ ಭುವನೇಶ್ವರ್ ಕುಮಾರ್ ಹಿಂದಿಕ್ಕಿದ್ದಾರೆ.

ಪಂದ್ಯದ ಬಗ್ಗೆ ನೋಡುವುದಾದರೆ, ದೀಪಕ ಹೂಡಾ ಮತ್ತು ಹಾರ್ದಿಕ ಪಾಂಡ್ಯ ಅವರ ಅತ್ಯುತ್ತಮ ಆಟದಿಂದ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಜಯ ಗಳಿಸಿತು. ಪಂದ್ಯದ ವೇಳೆ ಮಳೆ ಬಂದ ಕಾರಣದಿಂದ ಎರಡೂ ಇನ್ನಿಂಗ್ಸ್​ ತಲಾ 12 ಓವರ್​ಗಳಿಗೆ ಮಾತ್ರ ಸೀಮಿತವಾಗಿದ್ದವು. ಒಂದರಿಂದ ನಾಲ್ಕನೇ ಓವರಿನವರೆಗೆ ಮಾತ್ರ ಪವರ್ ಪ್ಲೇ ನಡೆಯಿತು ಹಾಗೂ ಮೂರು ಬೌಲರ್​ಗಳು ಎರಡು ಓವರ್ ಮತ್ತು ಇಬ್ಬರು ಬೌಲರ್ ಮೂರು ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಲಾಗಿತ್ತು.

ತಮ್ಮ ಮೂರು ವಿಕೆಟ್​ಗಳ ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ 16 ರನ್ ನೀಡಿ ಒಂದು ವಿಕೆಟ್ ಪಡೆದರು. ಹೂಡಾ 29 ಎಸೆತಗಳಲ್ಲಿ 47 ರನ್ ಹಾಗೂ ಹಾರ್ದಿಕ್ 12 ಎಸೆತಗಳಲ್ಲಿ 24 ರನ್ ಬಾರಿಸಿ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿದ್ದರು. ಐರ್ಲೆಂಡ್​ ನೀಡಿದ್ದ 109 ರನ್​ಗಳ ಗುರಿಯನ್ನು 9.2 ಓವರುಗಳಲ್ಲಿ 7 ವಿಕೆಟ್ ಇರುವಂತೆಯೇ ತಲುಪಿದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು.

ABOUT THE AUTHOR

...view details