ನವದೆಹಲಿ:ತಮಿಳುನಾಡಿನಲ್ಲಿ ನಡೆದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಪತ್ನಿ ಮಧುಲಿಕಾ ಮತ್ತು 11 ಮಂದಿಗಾಗಿ ಭೂತಾನ್ ರಾಜ ಜಿಗ್ಮೆ ಖೇಸರ್ ವಾಂಗ್‌ಚುಕ್ ಗುರುವಾರ ಪ್ರಾರ್ಥನೆ ಸಲ್ಲಿಸಿದರು.
ಜಿಗ್ಮೆ ಖೇಸರ್ ವಾಂಗ್‌ಚುಕ್ ತಂದೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಕೂಡಾ ಪ್ರಾರ್ಥನೆ ಸಲ್ಲಿಸಿದರು. ಇದರ ಜೊತೆಗೆ, ದುಃಖಿತ ಕುಟುಂಬಗಳಿಗೆ ಮತ್ತು ಭಾರತ ಸರ್ಕಾರಕ್ಕೆ ಸಂತಾಪ ಸಂದೇಶ ಕಳುಹಿಸಿದ್ದಾರೆ.
ಬಿಪಿನ್ ರಾವತ್ ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಬಾರಿ ಭೂತಾನ್‌ಗೆ ಭೇಟಿ ನೀಡಿದ್ದರು. ಭೂತಾನ್ ದೇಶದ ಉನ್ನತ ನಾಯಕತ್ವದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದರು. ಹೀಗಾಗಿ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭೂತಾನ್ ಪ್ರಧಾನಿ, ವಿದೇಶಾಂಗ ಸಚಿವರು ಮತ್ತು ದೇಶದ ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭೂತಾನ್ ಸಂಪ್ರದಾಯದಂತೆ, ಒಂದು ಸಾವಿರ ಬೆಣ್ಣೆ ದೀಪಗಳನ್ನು ಹೊತ್ತಿಸಲಾಗಿದ್ದು, ಈ ವೇಳೆ ಭಾರತೀಯ ರಾಯಭಾರಿ, ಭಾರತೀಯ ಮಿಲಿಟರಿ ತರಬೇತಿ ತಂಡದ ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ:ಹೆಲಿಕಾಪ್ಟರ್ ಅಪಘಾತದಲ್ಲಿ CDS ರಾವತ್ ಸೇರಿ 13 ಜನ ಸಾವು: ಯುಎಸ್, ರಷ್ಯಾ, ಪಾಕ್ ಇತರೆಡೆಗಳಿಂದ ಸಂತಾಪ