ಗಾಂಧಿನಗರ(ಗುಜರಾತ್): ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರದ ನೂತನ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುಮಾರು 24 ಮಂದಿ ಸಚಿವರಿಗೆ ರಾಜ್ಯಪಾಲ ಆಚಾರ್ಯ ದೇವ್ವ್ರತ್ ಪ್ರಮಾಣವಚನ ಬೋಧಿಸಿದರು.
ಹಿಂದಿನ ಮುಖ್ಯಮಂತ್ರಿ ವಿಜಯ್ ರೂಪಾಣಿ ನೇತೃತ್ವದ ಸಂಪುಟದಲ್ಲಿರುವ ಬಹುತೇಕ ಸಚಿವರನ್ನು ಕೈಬಿಡಲಾಗಿದೆ. ಸೋಮವಾರ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕರಿಸಿದ್ದರು.
ಪ್ರಮಾಣವಚನ ಸಮಾರಂಭ ಮುಕ್ತಾಯವಾಗಿದ್ದು, ಸಂಜೆ 4.30ಕ್ಕೆ ರಾಜ್ಯದ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ನಡೆಯಲಿದೆ.
ನೂತನ ಸಚಿವರ ಪಟ್ಟಿ ಇಂತಿದೆ:
1. ರಾಜೇಂದ್ರ ತ್ರಿವೇದಿ
2. ಜಿತೇಂದ್ರ ವಾಘನಿ
3. ಹೃಷಿಕೇಶ್ ಪಟೇಲ್
4. ಪೂರ್ಣೇಶ್ ಕುಮಾರ್ ಮೋದಿ
5. ರಾಘವ್ ಪಟೇಲ್
6. ಉದಯ್ ಸಿಂಗ್ ಚವಾಣ್
7. ಮೋಹನ್ ಲಾಲ್ ದೇಸಾಯಿ
8. ಕಿರಿಟ್ ರಾಣಾ
9. ಗಣೇಶ್ ಪಟೇಲ್
10. ಪ್ರದೀಪ್ ಪರ್ಮಾರ್