ಕರ್ನಾಟಕ

karnataka

ETV Bharat / bharat

ಚಂದೌಲಿಯ ದೇವಾಲಯದಲ್ಲಿ ಗುಪ್ತರ ಕಾಲದ ಇಟ್ಟಿಗೆ ಗೋಡೆ ಪತ್ತೆ - ಉತ್ತರ ಪ್ರದೇಶ

ಹಿಂದೂ ಶಿವ ದೇವಾಲಯದ ಆವರಣದಲ್ಲಿ ಪುರಾತನ ಇಟ್ಟಿಗೆ ಗೋಡೆಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪುರಾತತ್ವ ತಜ್ಞರ ತಂಡವು ಪತ್ತೆಹಚ್ಚಿದೆ.

Chandauli
ಗುಪ್ತರ ಕಾಲದ ಇಟ್ಟಿಗೆ ಗೋಡೆ

By

Published : Mar 22, 2021, 10:37 AM IST

ಚಂದೌಲಿ (ಉತ್ತರ ಪ್ರದೇಶ): ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪುರಾತತ್ವ ತಜ್ಞರ ತಂಡವು ಚಂದೌಲಿಯ ಪ್ರಾಚೀನ ಹಿಂದೂ ಶಿವ ದೇವಾಲಯದ ಆವರಣದಲ್ಲಿ ಪುರಾತನ ಇಟ್ಟಿಗೆ ಗೋಡೆಯನ್ನು ಪತ್ತೆ ಮಾಡಿದೆ. ಗೋಡೆಯು ಸುಮಾರು 10 ಮೀಟರ್ ಉದ್ದವಿದೆ.

ಮಾಹಿತಿಯ ಪ್ರಕಾರ, ದೇವಾಲಯದ ಹಿಂಭಾಗದಲ್ಲಿ ಇಟ್ಟಿಗೆ ಗೋಡೆ ಕಂಡುಬಂದಿದೆ. ಗೋಡೆಯು ಐದು ಪದರಗಳ ಇಟ್ಟಿಗೆಯನ್ನು ಹೊಂದಿದ್ದು, ಸುಣ್ಣದ ಮಿಶ್ರಣವನ್ನು ಬಳಸಿ ಇಟ್ಟಿಗೆಗಳನ್ನು ಒಟ್ಟಿಗೆ ಸೇರಿಸಲಾಗಿದೆ. ವೃತ್ತಾಕಾರದ ಪಗೋಡಾ ಕೂಡ ಕಂಡುಬಂದಿದೆ. ಪುರಾವೆಗಳ ಆಧಾರದ ಮೇಲೆ, ರಚನೆಗಳು ಗುಪ್ತ ಯುಗಕ್ಕೆ ಸಂಬಂಧಿಸಿರಬಹುದು ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ: ಮಥುರಾ; ಶ್ರೀಕೃಷ್ಣ ಜನ್ಮಭೂಮಿ ವಿವಾದ ಪ್ರಕರಣ ವಿಚಾರಣೆ ಇಂದು

ಕೆಲವು ಕುಶಾನಿಕ್ ಇಟ್ಟಿಗೆಗಳು 36 × 21 × 6 ಸೆಂ.ಮೀ ಆಯಾಮದೊಂದಿಗೆ ಕಂಡುಬಂದಿವೆ. ಇನ್ನು ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಥಳಕ್ಕೆ ಭೇಟಿ ನೀಡಿ ಉತ್ಖನನ ಕಾರ್ಯ ಕೈಗೊಳ್ಳಲು ತರಬೇತಿ ನೀಡಲಾಯಿತು.

ಇಲಾಖೆಯ ಛಾಯಾಗ್ರಾಹಕ ಬರುನ್ ಸಿನ್ಹಾ ಮತ್ತು ಕರಡುಗಾರ ಶಿವಶಂಕರ್ ಪ್ರಜಾಪತಿ ಅವರು ಉತ್ಖನನಕ್ಕೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಉತ್ಖನನ ವಿಭಾಗದ ನಿರ್ದೇಶಕ ಡಾ. ವಿನಯ್ ಕುಮಾರ್, ಸಂಶೋಧಕರಾದ ಅಭಿಷೇಕ್ ಕುಮಾರ್ ಸಿಂಗ್, ರಾಹುಲ್ ತ್ಯಾಗಿ ಮತ್ತು ಪರಮದೀಪ್ ಪಟೇಲ್ ಅವರು ಉತ್ಖನನ ಕಾರ್ಯದಲ್ಲಿ ತೊಡಗಿದ್ದಾರೆ.

ABOUT THE AUTHOR

...view details