ಮಧ್ಯಪ್ರದೇಶ : ಭೋಪಾಲ್ನಲ್ಲಿ ಅಚ್ಚರಿಯ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಯುವತಿಯೊಬ್ಬರು ತನ್ನ ಮಾಜಿ ಗೆಳೆಯನಿಗೆ ಆಹಾರವನ್ನು ಆರ್ಡರ್ ಮಾಡಿದ್ದರಿಂದ ತೊಂದರೆಗೀಡಾದ ಜೊಮ್ಯಾಟೊ ಕಂಪನಿಯು ಬೇಸತ್ತು ಟ್ವೀಟ್ ಮಾಡುವ ಮೂಲಕ " ದಯವಿಟ್ಟು ತಮ್ಮ ಗೆಳೆಯನಿಗೆ ಕ್ಯಾಶ್ ಆನ್ ಡೆಲಿವರಿ ಫುಡ್ ಆರ್ಡರ್ ಮಾಡುವುದನ್ನು ನಿಲ್ಲಿಸುವಂತೆ" ಕೇಳಿಕೊಂಡಿದೆ. ಕಂಪನಿಯ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಹೌದು, ಭೋಪಾಲ್‌ನ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನಿಗೆ ಕಿರುಕುಳ ನೀಡಲು ವಿಶಿಷ್ಟವಾದ ಮಾರ್ಗವನ್ನು ಕಂಡು ಕೊಂಡಿದ್ದಾಳೆ. ಆದರೆ, ಯುವತಿಯ ವಿಧಾನದಿಂದ ಆನ್‌ಲೈನ್ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೊ ಅಸಮಾಧಾನಗೊಂಡಿದೆ. ಅಂತಿಮವಾಗಿ, ಟ್ವೀಟ್ ಮಾಡಿ "ಅಂಕಿತಾ ಅವರೆ, ದಯವಿಟ್ಟು ನಿಮ್ಮ ಗೆಳೆಯನಿಗೆ ಕ್ಯಾಶ್ ಆನ್ ಡೆಲಿವರಿ ಆಹಾರವನ್ನು ಆರ್ಡರ್ ಮಾಡುವುದನ್ನು ನಿಲ್ಲಿಸಿ. ಏಕೆಂದರೆ, ಅವನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾನೆ" ಎಂದು ಮನವಿ ಮಾಡಿದೆ. ಕ್ಯಾಶ್ ಆನ್ ಡೆಲಿವರಿ ಎಂದರೆ ಆರ್ಡರ್ ಡೆಲಿವರಿಯಾದಾಗ ಅದನ್ನು ಸ್ವೀಕರಿಸುವ ವ್ಯಕ್ತಿ ಹಣ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ :ಸ್ವಿಗ್ಗಿ , ಜೊಮ್ಯಾಟೋ ದರ ; ONDC ಜೊತೆ ಒಪ್ಪಂದಕ್ಕೆ ಮುಂದಾದ ಬೆಂಗಳೂರು ಹೊಟೇಲ್ ಅಸೋಸಿಯೇಷನ್
ಭೋಪಾಲ್‌ನ ಅಂಕಿತಾ ಎಂಬುವರು ಇದನ್ನು ಒಂದಲ್ಲ ಮೂರು ಬಾರಿ ಮಾಡಿದ್ದಾರೆ. ಪ್ರತಿ ಬಾರಿ ಜೊಮ್ಯಾಟೊದಿಂದ ಆಹಾರವನ್ನು ಆರ್ಡರ್ ಮಾಡಿದಾಗ ಆಕೆಯ ಮಾಜಿ ಗೆಳೆಯ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾನೆ. ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ನಡುವಿನ ಜಗಳದ ನಡುವೆ ಆನ್ ಲೈನ್ ಫುಡ್ ಡೆಲಿವರಿ ಕಂಪನಿ ಜೊಮ್ಯಟೊ ತಲೆ ಕೆಡಿಸಿಕೊಂಡಿದೆ. ಅಂತಿಮವಾಗಿ, ಯುವತಿಯ ಹೆಸರನ್ನು ಬಹಿರಂಗಪಡಿಸುವ ಮೂಲಕ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದೆ.