ಭೋಪಾಲ್(ಮಧ್ಯಪ್ರದೇಶ): ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ಕೋರ್ಟ್ನ ಮಧ್ಯಸ್ಥಿಕೆ ಕೇಂದ್ರದಲ್ಲಿ ವಿಚ್ಛೇದನದ ಬಗ್ಗೆ ಕುತೂಹಲಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಾನು ಸುಂದರವಾಗಿಲ್ಲದ ಕಾರಣ ಮತ್ತು ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗದ ಕಾರಣ ಪತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ಯುಪಿಎಸ್‌ಸಿ ತೇರ್ಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಪತಿ ನನ್ನನ್ನು ಮದುವೆಯಾಗಿದ್ದರು. ಆದರೆ, ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲಿಲ್ಲ. ಈಗ ನೋಡಲು ಚೆನ್ನಾಗಿಲ್ಲ ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಪತ್ನಿ ಚೆನ್ನಾಗಿ ಓದುತ್ತಾಳೆ ಎಂದು ವಿವಾಹ ಆಗಿದ್ದರಂತೆ.
ಪತಿ ಸರ್ಕಾರಿ ನೌಕರಿಯಲ್ಲಿದ್ದು, ಭೋಪಾಲ್‌ನ ಅರೆರಾ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಪತ್ನಿಯ ಅಂದದ ಬಗ್ಗೆ ಆಕ್ರೋಶಗೊಂಡಿದ್ದಾರಂತೆ. ಹೆಂಡತಿ ಸಣ್ಣ ವಿಷಯಗಳಿಗೆ ಹೈಪರ್ ಆಗುತ್ತಾಳೆ, ಅನೇಕ ಬಾರಿ ಗ್ಯಾಸ್ಆನ್ನಲ್ಲೇ ಇಟ್ಟು ಬಿಟ್ಟು ಕೋಣೆಗೆ ಬೀಗ ಹಾಕಿ ಬರುತ್ತಾಳೆ. ಒಂದು ದಿನ ಸಿಗರೇಟ್ ಸೇದುವಾಗ ಮನೆಗೆ ಬೆಂಕಿ ಹರಡುತ್ತದೆ ಎಂದು ಮುಖದ ಮೇಲೆಯೇ ಬಕೆಟ್ಗಟ್ಟಲೆ ನೀರನ್ನು ಸುರಿದಿದ್ದಾಳೆ. ಇಂಥಹ ಪರಿಸ್ಥಿತಿಯಲ್ಲಿ ನಾನು ಅವಳೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಪತಿ ಗಂಭೀರ ಆರೋಪ ಮಾಡಿದ್ದಾರೆ.
ವಿದ್ಯಾಭ್ಯಾಸಲ್ಲಿ ಸೊಸೆ ಹೆಚ್ಚು ಮಗ್ನಳಾಗಿರುವುದರಿಂದ ಆಕೆಗೆ ಲೌಕಿಕತೆಯ ಬಗ್ಗೆ ಅಷ್ಟೊಂದು ತಿಳುವಳಿಕೆ ಇಲ್ಲ, ಬಹುಶಃ ಕುಟುಂಬದ ಜವಾಬ್ದಾರಿಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಪ್ರಕರಣ ಹಾಗೂ ಕೌಟುಂಬಿಕ ಸಮಸ್ಯೆಗಳಿಂದಾಗಿ ಆತನಿಗೂ ವೃತ್ತಿಯತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಸೊಸೆಗೂ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರಿಬ್ಬರ ಪೋಷಕರು ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಬಾಂಬ್ ಸ್ಫೋಟ: ಮಹಿಳೆ ಸೇರಿ ಆರು ಜನರ ಸಾವು, 50 ಮೀಟರ್ ದೂರಕ್ಕೆ ತೂರಿಬಿದ್ದ ದೇಹ