ಕರ್ನಾಟಕ

karnataka

ETV Bharat / bharat

ಆರೋಗ್ಯದಲ್ಲಿ ದಿಢೀರ್ ಏರುಪೇರು: ಏರ್​​ ಆಂಬ್ಯುಲೆನ್ಸ್​ ಮೂಲಕ ಸಂಸದೆ ಸಾಧ್ವಿ ಮುಂಬೈಗೆ ರವಾನೆ! - ಸಾಧ್ವಿ ಆರೋಗ್ಯದಲ್ಲಿ ಏರುಪೇರು

ಕಳೆದ ಕೆಲ ದಿನಗಳ ಹಿಂದೆ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಇದೀಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

MP Pragya Singh Thakur
MP Pragya Singh Thakur

By

Published : Mar 6, 2021, 3:33 PM IST

ಭೋಪಾಲ್​:ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​​ ಅವರ ಆರೋಗ್ಯ ಹದಗೆಟ್ಟಿರುವ ಕಾರಣ ಅವರನ್ನ ಇದೀಗ ಏರ್​​​​​​​ ಆಂಬ್ಯುಲೆನ್ಸ್​​ ಮೂಲಕ ಮುಂಬೈಗೆ ರವಾನೆ ಮಾಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿದ್ದ ಅವರ ಆರೋಗ್ಯದಲ್ಲಿ ಇದೀಗ ದಿಢೀರ್​ ಹದಗೆಟ್ಟಿರುವ ಕಾರಣ ಮುಂಬೈಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪಕ್ಷದ ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​

ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ ಸಾಧ್ವಿ ಜಿಲ್ಲಾ ಪಂಚಾಯತ್​ ಕಚೇರಿಯಲ್ಲಿನ ದಿಶಾ ಸಮಿತಿಯ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ದಿಢೀರ್​ ಆರೋಗ್ಯ ಹದೆಗೆಟ್ಟಿರುವ ಕಾರಣ ಇದೀಗ ಆಸ್ಪತ್ರೆಗೆ ದಾಖಲಾಗಲಿದ್ದಾರೆ.

ABOUT THE AUTHOR

...view details