ಕರ್ನಾಟಕ

karnataka

ETV Bharat / bharat

ಮಹಿಳೆ ಮುಟ್ಟಿದ್ರೆ ಮೂರ್ಛೆ ಹೋಗುವ ಪೂಜಾರಿ.. ಇದು ಒಂಥರಾ ವಿಷ್ಟುವರ್ಧನ ಅಭಿನಯದ ಆಪ್ತಮಿತ್ರದ ಕಥೆಯಂತಿದೆ! - ಮಧ್ಯಪ್ರದೇಶದಲ್ಲಿ ಮಹಿಳೆ ಮುಟ್ಟಿದ್ರೆ ಮೂರ್ಛೆ ಹೋಗುವ ಪೂಜಾರಿ

ಮಧ್ಯಪ್ರದೇಶದ ಭೋಪಾಲ್‌ನ ಜೆಪಿ ಆಸ್ಪತ್ರೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯರು ಮುಟ್ಟಿದ ತಕ್ಷಣ ಪೂಜಾರಿ ಮೂರ್ಛೆ ಹೋಗುವಂತಹ ಘಟನೆ ಕಂಡುಬಂದಿದೆ. ಈ ಬಗ್ಗೆ ಮನೋವೈದ್ಯರು ಹೇಳೋದೇನು ಎಂಬುದು ತಿಳಿಯೋಣಾ ಬನ್ನಿ..

bhopal hanuman devotee  Bhopal Conversion Disorder Priest  priest faints as soon as he touches by women  ಮಧ್ಯಪ್ರದೇಶದಲ್ಲಿ ಕನ್ವರ್ಷನ್​ ಡಿಸಾರ್ಡರ್​ದಿಂದ ಬಳಲುತ್ತಿರುವ ಪೂಜಾರಿ  ಭೋಪಾಲ್​ನಲ್ಲಿ ಹನುಮಾನ ಪೂಜಾರಿ ಸುದ್ದಿ  ಮಧ್ಯಪ್ರದೇಶದಲ್ಲಿ ಮಹಿಳೆ ಮುಟ್ಟಿದ್ರೆ ಮೂರ್ಛೆ ಹೋಗುವ ಪೂಜಾರಿ  ಮಧ್ಯಪ್ರದೇಶ ಸುದ್ದಿ
ಮಹಿಳೆ ಮುಟ್ಟಿದ್ರೆ ಮೂರ್ಛೆ ಹೋಗುವ ಪೂಜಾರಿ

By

Published : Jun 23, 2022, 7:47 AM IST

ಭೋಪಾಲ್ (ಮಧ್ಯಪ್ರದೇಶ): ಇಲ್ಲೊಬ್ಬ ಪೂಜಾರಿಗೆ ವಿಚಿತ್ರ ಕಾಯಿಲೆಯೊಂದು ವಕ್ಕರಿಸಿಕೊಂಡಿದೆ. ಅವರಿಗೆ ಮಹಿಳೆ ಯಾರಾದ್ರೂ ಮುಟ್ಟಿದ್ರೆ ಸಾಕು ಪ್ರಜ್ಞೆ ತಪ್ಪಿ ಕೆಳಗೆ ಬೀಳುತ್ತಾರೆ. ಅವರು ಕನ್ವರ್ಷನ್​ ಡಿಸಾರ್ಡರ್​ದಿಂದ ಬಳಲುತ್ತಿದ್ದಾರೆ ಎಂದು ಮನೋವೈದ್ಯರು ಹೇಳಿದ್ದಾರೆ.

ಮಹಿಳೆ ಮುಟ್ಟಿದ್ರೆ ಮೂರ್ಛೆ ಹೋಗುವ ಪೂಜಾರಿಯ ವಿಡಿಯೋ...

ಮಹಿಳೆ ಮುಟ್ಟಿದರೆ ಪ್ರಜ್ಞೆ ತಪ್ಪುವ ಪೂಜಾರಿ: ಭೋಪಾಲ್‌ನ ಜೆಪಿ ಆಸ್ಪತ್ರೆಯಲ್ಲಿ ವಿಭಿನ್ನ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಬೆರಾಸಿಯಾದ ಹನುಮಾನ್ ದೇವಸ್ಥಾನದ ಅರ್ಚಕನನ್ನು ಹೊತ್ತುಕೊಂಡು ಮನೋವೈದ್ಯಕೀಯ ವಿಭಾಗಕ್ಕೆ ಕೆಲವು ಭಕ್ತರು ಕರೆದುಕೊಂಡು ಬಂದ್ರು. ಮಹಿಳಾ ನರ್ಸ್ ಅವರನ್ನು ಮುಟ್ಟಿದ ತಕ್ಷಣ ಪೂಜಾರಿ ಪ್ರಜ್ಞೆ ತಪ್ಪಿದರು. ಸ್ವಲ್ಪ ಸಮಯದ ನಂತರ ಪುರೋಹಿತರಿಗೆ ಪ್ರಜ್ಞೆ ಬಂದಾಗ, ಮಹಿಳೆ ಯಾರಾದ್ರೂ ನನ್ನನ್ನು ಸ್ಪರ್ಶಿಸಿದಾಗ ನಾನು ಮೂರ್ಛೆ ಹೋಗುತ್ತೇನೆ. ಏಕೆಂದರೆ ಬ್ರಹ್ಮಚರ್ಯವನ್ನು ಆಚರಿಸುವ ಭಗವಾನ್ ಹನುಮಾನ್ ಶಕ್ತಿ ನನ್ನ ಮೇಲೆ ಬರುತ್ತದೆ ಎಂದು ಹೇಳಿದರು.

ಓದಿ:ದಂಡಿನ ದುರ್ಗಾದೇವಿ ಜಾತ್ರೆ: ತಲೆಗೆ ತೆಂಗಿನಕಾಯಿ ಒಡೆದುಕೊಂಡು ಭಕ್ತಿ ಸಮರ್ಪಣೆ

ಮನೋರೋಗದಿಂದ ಬಳಲುತ್ತಿರುವ ಪೂಜಾರಿ:ಇದಾದ ಬಳಿಕ ಮನೋವೈದ್ಯ ಆರ್.ಕೆ.ಬೈರಾಗಿ ಅರ್ಚಕರ ತಪಾಸಣೆ ನಡೆಸಿದರು. ನಂತರ ಪೂಜಾರಿ ಬಳಿ ‘ನೀವು ಕುಳಿತುಕೊಳ್ಳಿ, ನಮ್ಮ ಮಹಿಳಾ ನರ್ಸ್ ನಿಮ್ಮನ್ನು ಮುಟ್ಟುತ್ತಾರೆ. ನಂತರ ನಿಮಗೆ ಮೂರ್ಛೆ ಬರುತ್ತದೋ.. ಇಲ್ಲವೋ.. ನೋಡೋಣ ಎಂದು ಹೇಳಿದ್ದರು. ಪುರೋಹಿತರು ಈ ವಿಷಯವನ್ನು ಒಪ್ಪಿಕೊಂಡರು.

ಈ ವೇಳೆ, ವೈದ್ಯರು ಮಹಿಳೆ ನರ್ಸ್​ ಬದಲು ಪುರುಷ ನರ್ಸ್​ಗೆ ಮುಟ್ಟಲು ಹೇಳಿದರು. ಆದ್ರೆ ಈ ವಿಚಾರ ಪೂಜಾರಿಗೆ ತಿಳಿದಿರಲಿಲ್ಲ. ಪುರುಷ ನರ್ಸ್​ ಮುಟ್ಟಿದಾಕ್ಷಣ ಪೂಜಾರಿ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ‘ಮಹಿಳಾ ನರ್ಸ್ ನನ್ನನ್ನು ಮುಟ್ಟಿದ್ದರಿಂದ ನಾನು ಪ್ರಜ್ಞೆ ತಪ್ಪಿದೆ’ ಎಂದು ಪೂಜಾರಿ ವೈದ್ಯರಿಗೆ ಹೇಳಿದ್ದಾರೆ. ಇದಾದ ನಂತರ ವೈದ್ಯರು ಚಿಕಿತ್ಸೆಯನ್ನು ಪ್ರಾರಂಭಿಸಿದರು.

ಕನ್ವರ್ಷನ್​ ಡಿಸಾರ್ಡರ್ :ಇದು ಒಂದು ರೀತಿಯ ಕನ್ವರ್ಷನ್​ ಡಿಸಾರ್ಡರ್ (conversion disorder). ಈ ಕಾಯಿಲೆಯಿಂದ ಬಳಲುತ್ತಿರುವ ಯಾವುದಾದ್ರೂ ವ್ಯಕ್ತಿ ಇನ್ನೊಬ್ಬರ ಥರ ಊಹಿಸಿಕೊಂಡು ಅವರ ರೀತಿ ಡಬ್​ ಮಾಡುವುದನ್ನ ಪ್ರಾರಂಭಿಸುತ್ತಾನೆ. ಇಂತಹ ಕಾಯಿಲೆ ವ್ಯಕ್ತಿಗಳು ನಾನೇ ಅಮಿತಾಬ್ ಬಚ್ಚನ್ ಎಂದು ಕೊಂಡು ಅವರಂತೆ ಜೀವಿಸಲು ಮುಂದುವರಿಸುತ್ತಾರೆ.

ಹೀಗೆ ಪೂಜಾರಿ ಸಹ ತನ್ನನ್ನು ತಾನು ಹನುಮ ದೇವರೆಂದು ಪರಿಗಣಿಸಲು ಪ್ರಾರಂಭಿಸಿದನು. ಹೀಗಾಗಿ ಮಹಿಳೆ ಮುಟ್ಟಿದ್ರೆ ನನಗೆ ಪ್ರಜ್ಞೆ ತಪ್ಪುತ್ತೆ ಎಂದು ಭ್ರಮೆಯಲ್ಲಿ ಬದುಕಲು ಶುರು ಮಾಡಿದನು. ಹೀಗಾಗಿ ಮಹಿಳೆ ಎಂದು ಪುರಷ ಮುಟ್ಟಿದ್ರೂ ಸಹ ಅವರು ಪ್ರಜ್ಞೆ ತಪ್ಪುತ್ತಾರೆ ಎಂದು ವೈದ್ಯರು ಹೇಳಿದ್ರು. (ಸರಳ ರೀತಿಯಲ್ಲಿ ಹೇಳಬೇಕಾದ್ರೆ ನಾಗವಲ್ಲಿ ಅಥವಾ ಆಪ್ತಮಿತ್ರ ಚಿತ್ರದಲ್ಲಿ ಸೌಂದರ್ಯಗೆ ಇದ್ದ ಮನರೋಗವೇ ಪೂಜಾರಿಗೂ ಇರುವುದು)

ವೈದ್ಯರು ಹೇಳಿದ್ದೇನು?: ಇವರೊಬ್ಬರೇ ಅಲ್ಲ ಎಷ್ಟೋ ಪೂಜಾರಿಗಳು ಇಂತಹ ಮನೋರೋಗದಿಂದ ಬಳಲುತ್ತಿದ್ದಾರೆ. ಅವರಿಗೆ ನಿಯಮಿತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಿದರೆ ಗುಣಮುಖರಾಗುತ್ತಾರೆ ಎಂದು ಮನೋವೈದ್ಯ ಆರ್.ಕೆ.ಬೈರಾಗಿ ಹೇಳಿದರು.

ABOUT THE AUTHOR

...view details