ಭೋಪಾಲ್:ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೇಕೆಯೊಂದು ಪವಿತ್ರ ಹಬ್ಬ ಈದ್-ಅಲ್ ಅಧಾದ( ಬಕ್ರೀದ್) ನ ನಿಮಿತ್ತ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮೇಕೆಯ ಮಾಲೀಕ ಸುಹೇಲ್ ಅಹಮದ್ ಈ ಮೇಕೆಗೆ 'ಕಿಂಗ್' ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ಈ ಮೇಕೆ 176 ಕೆಜಿ ತೂಕ ಹೊಂದಿದ್ದು, ಇದರ ಬೆಲೆ 12 ಲಕ್ಷ ರೂಪಾಯಿ ಎಂದು ನಿಗದಿ ಮಾಡಲಾಗಿದೆ.
ಬಕ್ರೀದ್ ನಿಮಿತ್ತ ಮೇಕೆಗಳ ಮಾರಾಟ ಜೋರಾಗಿರುತ್ತದೆ. ಈ ಸಂದರ್ಭದಲ್ಲಿ ಮೇಕೆಗಳಿಗೆ ಭಾರಿ ಬೇಡಿಕೆ ಬರುತ್ತದೆ. ಪರಿಣಾಮ ಮಾರಾಟ ಮತ್ತು ಖರೀದಿ ಜೋರಾಗಿಯೇ ಇರುತ್ತದೆ. ಹೀಗಾಗಿ ಈ ಮಾರುಕಟ್ಟೆಗೆ ಕೋಟಾ ತಳಿಯ ಮೇಕೆಗಳನ್ನು ತರುತ್ತೇನೆ ಅಂತಿದ್ದಾರೆ ಕಿಂಗ್ ಎಂಬ ಬಹುಬೇಡಿಕೆ ಮೇಕೆಯ ಮಾಲೀಕ ಅಹಮದ್.
ಕಿಂಗ್ಗೆ ಕೂಲರ್ ಆಸರೆ:ಬಹುಬೇಡಿಕೆಯ ಬೆಲೆ ಬಾಳುವ ಕಿಂಗ್ಗೆಬಿಸಿಲಿನಿಂದ ರಕ್ಷಿಸಲು ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಮೇಕೆಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಕಾಲಕಾಲಕ್ಕೆ, ಪಶು ವೈದ್ಯರು ಅವುಗಳ ಆರೋಗ್ಯವನ್ನು ಪರೀಕ್ಷಿಸುವ ವ್ಯವಸ್ಥೆಯನ್ನೂ ಕೂಡಾ ಮಾಡಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಮೇಕೆಗಳ ಶೆಡ್ ಒಳಗೆ ಎರಡು ಕೂಲರ್ಗಳನ್ನು ಅಳವಡಿಸಲಾಗಿದೆ.
ಕಿಂಗ್ ಬಗ್ಗೆ ಅದರ ಮಾಲೀಕ ಹೇಳಿದ್ದಿಷ್ಟು:ಈದ್ ಅಲ್ - ಅಧಾ ಹಬ್ಬದ ನಿಮಿತ್ತ ಎಂಟು ತಿಂಗಳ ಹಿಂದೆ ರಾಜಸ್ಥಾನದಿಂದ ಈ ಮೇಕೆಯನ್ನು ಖರೀದಿಸಿ ತಂದಿದ್ದೇನೆ. ‘ಕಿಂಗ್’ ಗೆ ನಾಲ್ಕು ಗಂಟೆಗೊಮ್ಮೆ ಬೇಳೆ, ಗೋಧಿ, ಹಾಲು, ಖರ್ಜೂರ ಮತ್ತು ಜೇನುತುಪ್ಪವನ್ನು ನೀಡಲಾಗುತ್ತದೆ. ಈ ಮೇಕೆ 43 ಇಂಚು ಎತ್ತರವಿದೆ ಎಂದು ಅಹ್ಮದ್ ಮಾಹಿತಿ ನೀಡಿದ್ದಾರೆ. ಅಂದ ಹಾಗೆ ಈ ಮೇಕೆಯನ್ನ ಅಹ್ಮದ್ ಮುಂಬೈ ನಿವಾಸಿ ಅನ್ಸರ್ ಖಾನ್ ಅಹ್ಮದ್ ಎಂಬುವವರಿಗೆ ಮಾರಾಟ ಮಾಡಿದ್ದು, 12 ಲಕ್ಷ ರೂ ಗೆ ವ್ಯಾಪಾರ ಕುದುರಿಸಿದ್ದಾರೆ.
ಆಡುಗಳನ್ನು ಸಾಕಲು ಇಷ್ಟಪಡುತ್ತೇನೆ ಎನ್ನುವ ಅಹಮದ್, ಸಾಮಾನ್ಯವಾಗಿ ಹಲವು ತಳಿಯ ಮೇಕೆಗಳನ್ನು ಸಾಕುತ್ತೇನೆ. ಆದರೆ ಇದೇ ಮೊದಲ ಸಲ ಕೋಟ ಮೇಕೆ ಸಾಕಿದ್ದೇನೆ ಎಂದು ಹೇಳಿದ್ದಾರೆ. ಇಸ್ಲಾಮಿಕ್ ನ 12 ನೇ ತಿಂಗಳಾದ ಧು ಅಲ್-ಹಿಜ್ಜಾದನ 10 ನೇ ದಿನದಂದು 'ತ್ಯಾಗದ ಹಬ್ಬ' ಎಂದು ಕರೆಯಲ್ಪಡುವ ಈದ್ ಅಲ್-ಅಧಾ( ಬಕ್ರೀದ್) ಪವಿತ್ರ ಹಬ್ಬವನ್ನು ಆಚರಿಸಲಾಗುತ್ತದೆ. ಈದ್ ಕುರ್ಬಾನ್ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಈ ಹಬ್ಬವನ್ನ ಕರೆಲಾಗುತ್ತದೆ. ಇದು ವಾರ್ಷಿಕ ಹಜ್ ತೀರ್ಥಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ. ಈದ್ ಅಲ್-ಅಧಾ ವರ್ಷದ ಎರಡನೇ ಇಸ್ಲಾಮಿಕ್ ಹಬ್ಬವಾಗಿದೆ.
ಬಕ್ರೀದ್ಗೆ ಅರೇಬಿಕ್ ಭಾಷೆಯಲ್ಲಿ ಈದ್-ಉಲ್-ಅಧಾ ಎಂದು ಕರೆಯಲಾಗುತ್ತದೆ. ಭಾರತೀಯ ಉಪಖಂಡದಲ್ಲಿ ಬಕರ್-ಇದ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಏಕೆಂದರೆ ಮೇಕೆ ಅಥವಾ 'ಬಕ್ರಿ' ತ್ಯಾಗ ಮಾಡುವ ಸಂಪ್ರದಾಯ ಈ ಹಬ್ಬದಂದು ಮಾಡಲಾಗುತ್ತದೆ. ಇದು ಭಾರತದಲ್ಲಿ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುವ ಹಬ್ಬವಾಗಿದೆ.
ಇದನ್ನು ಓದಿ:ವಿಶ್ವದ ಅತ್ಯಂತ ಪ್ರಸಿದ್ಧ ರೆಸ್ಟೋರೆಂಟ್ ಖ್ಯಾತಿಗೆ ಪಾತ್ರವಾದ ಪ್ಯಾರಾಗಾನ್ ರೆಸ್ಟೋರೆಂಟ್