ಹೈದರಾಬಾದ್ :ಇಡೀ ದೇಶಕ್ಕೆ ಕಪ್ಪು ಚುಕ್ಕೆಯಾಗಿದ್ದ ಸಾವಿರಾರು ಮಂದಿಯನ್ನು ಬಲಿ ಪಡೆದಿದ್ದ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸಂಭವಿಸಿದ್ದ ಅನಿಲ ದುರಂತಕ್ಕೆ 37 ವರ್ಷ. 1984ರ ಡಿಸೆಂಬರ್ 2-3ರ ಮಧ್ಯರಾತ್ರಿ ಸಂಭವಿಸಿದ್ದ ಅತಿ ಘೋರ ದುರಂತದಿಂದ ಇಂದಿಗೂ ಅಲ್ಲಿನ ಜನ, ಹುಟ್ಟುವ ಮಕ್ಕಳು ನರಕಯಾತೆ ಅನುಭವಿಸುತ್ತಿದ್ದಾರೆ.
1984ರಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ನ ಕೀಟನಾಶಕ ಸ್ಥಾವರದಿಂದ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿತ್ತು. ದುರಂತದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಆದರೆ, ಮೂರು ದಶಕಗಳು ಕಳೆದರೂ ಇಂದಿಗೂ ಸಂತ್ರಸ್ತರಿಗೆ ಸೂಕ್ತ ನ್ಯಾಯ ಸಿಗಲಿಲ್ಲ.
ಘಟನೆಯಲ್ಲಿ ಮೃತಪಟ್ಟವರು ಹಾಗೂ ಸಂಬಂಧಿತರಿಗೆ ಪರಿಹಾರ ನೀಡಲು ಈವರೆಗಿನ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಜಗತ್ತಿನಲ್ಲೇ ಅತ್ಯಂತ ಕೆಟ್ಟ ಕೈಗಾರಿಕಾ ವಿಪತ್ತುಗಳಲ್ಲಿ ಒಂದಾಗಿರುವ ಈ ದುರಂತದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಮೀಥೈಲ್ ಐಸೊಸೈನೇಟ್ ಅನಿಲ ದುರಂತದಲ್ಲಿ ಸಿಲುಕಿ ಪರಿತಪಿಸಿದ್ದಾರೆ.