ಪೂರ್ಣಿಯಾ (ಬಿಹಾರ): ಪೂರ್ಣಿಯಾ ರುಪೌಲಿಯ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ತಮ್ಮ ಪ್ರೀತಿಯ ಮಡದಿಯ ಚಿತಾಭಸ್ಮವನ್ನು, ಕಳೆದ 32 ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿದ್ದು, ಇಂದಿಗೂ ಆಕೆಯ ನೆನಪಿನಲ್ಲಿ ಬದುಕುತ್ತಿದ್ದಾರೆ.
ಹೆಂಡತಿಯ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿರುವ ಭೋಲಾನಾಥ್ ಅಲೋಕ್ ಅವರು, ಚಿತಾಭಸ್ಮವನ್ನು ನೀರಿನಲ್ಲಿ ಬಿಡದೇ ತಮ್ಮ ತೋಟದ ಮರದ ಕೊಂಬೆಗೆ ನೇತು ಹಾಕಿ ಕಾಪಾಡಿಕೊಂಡು ಬಂದಿದ್ದಾರೆ. ಸತ್ತ ನಂತರ ಅವರಿಬ್ಬರು ಒಟ್ಟಿಗೆ ಇಹಲೋಕ ತ್ಯಜಿಸಬೇಕು ಎಂಬ ಉದ್ದೇಶದಿಂದ ಇದನ್ನು ಇಟ್ಟುಕೊಂಡಿದ್ದಾರೆ. ಅಲ್ಲದೇ ಅವರು ಸತ್ತ ನಂತರ ಈ ಚಿತಾಭಸ್ಮವನ್ನು ಅವರ ಎದೆಗೆ ಜೋಡಿಸಬೇಕಂತೆ.
ನಾವು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೇವು. ನಂತರ ನಾವಿಬ್ಬರೂ ಬದುಕಿದ್ರೂ ಒಟ್ಟಿಗೆ, ಸತ್ತರು ಒಟ್ಟಿಗೆ ಸಾಯಬೇಕು ಎಂದು ಪ್ರತಿಜ್ಞೆ ಮಾಡಿದ್ದೇವು. ಆದ್ರೆ ಆಕೆ ನನ್ನನ್ನು ಬಿಟ್ಟು ಹೋದಳು, ನಾನು ಸಾಯಲು ಸಾಧ್ಯವಾಗಲಿಲ್ಲ. ನಾನು ನನ್ನ ಹೆಂಡತಿಯ ನೆನಪುಗಳೊಂದಿಗೆ ಬದುಕುತ್ತಿದ್ದೇನೆ. ಮನೆಯ ತೋಟದಲ್ಲಿ ಮರಕ್ಕೆ ನೇತಾಡುತ್ತಿರುವ ಕಟ್ಟು ತೋರಿಸಿ 32 ವರ್ಷಗಳಿಂದ ಪತ್ನಿಯ ಚಿತಾಭಸ್ಮವನ್ನು ಕೊಂಬೆಗೆ ನೇತು ಹಾಕಿಕೊಂಡು ಸುರಕ್ಷಿತವಾಗಿ ಇಡುತ್ತಿದ್ದೇನೆ. ಬಹುಶಃ ನನ್ನ ಪದ್ಮಾ (ಹೆಂಡತಿಯ ಹೆಸರು) ಇಲ್ಲ, ಆದರೆ ಈ ಚಿತಾಭಸ್ಮ ಅವಳ ನೆನಪುಗಳನ್ನು ಅಳಿಸಲು ಬಿಡುವುದಿಲ್ಲ. ನನ್ನ ಕೊನೆಯ ಪ್ರಯಾಣದಲ್ಲಿ ಹೆಂಡತಿಯ ಚಿತಾಭಸ್ಮವನ್ನು ನನ್ನೊಂದಿಗೆ ಇಡುವಂತೆ ಮಕ್ಕಳಿಗೆ ಹೇಳಿದ್ದೇನೆ ಎಂದು ಭೋಲಾನಾಥ್ ಹೇಳುತ್ತಾರೆ.