ಭಿವಂಡಿ: ಬೃಹತ್ ಗೋದಾಮುವೊಂದು ಕುಸಿದು ಬಿದ್ದಿದ್ದು, ಅದರ ಅವಶೇಷಗಳಡಿ ಹಲವರು ಸಿಲುಕಿರುವ ಘಟನೆ ಇಲ್ಲಿನ ಮಂಕೋಲಿಯ ಹರಿಹರ್ ಕಂಪೌಂಡ್ ಬಳಿ ನಡೆದಿದೆ.
ಹಠಾತ್ ಕುಸಿದ ಬೃಹತ್ ಗೋದಾಮು... ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ! ವಿಡಿಯೋ... - ಭೀವಂಡಿ ಗೋದಾಮು ಸುದ್ದಿ
ಮಹಾರಾಷ್ಟ್ರದ ಭಿವಂಡಿ ಜಿಲ್ಲೆಯಲ್ಲಿ ಬೃಹತ್ ಗೋದಾಮುವೊಂದು ಕುಸಿದು ಬಿದ್ದು, ಅದರ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಹಠಾತ್ ಕುಸಿದು ಬಿದ್ದ ಬೃಹತ್ ಗೋದಾಮು
ಇಂದು ಬೆಳಗ್ಗೆ 10.15ರ ಸುಮಾರಿಗೆ ಭಿವಂಡಿ ತಾಲ್ಲೂಕಿನ ಮಂಕೋಲಿ ಗ್ರಾಮದ ಹರಿಹರ್ ಕಂಪೌಂಡ್‌ನಲ್ಲಿರುವ ಪ್ಲಾಟ್ ನಂ ಎ/8 ರಲ್ಲಿರುವ ಬೃಹತ್ ಗೋದಾಮು ಇದ್ದಕ್ಕಿದ್ದಂತೆ ಕುಸಿದಿದೆ. ಗೋದಾಮು ಕುಸಿದಾಗ ಒಂಬತ್ತರಿಂದ ಹತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರೆಲ್ಲ ಅವಶೇಷಗಳಡಿ ಸಿಲುಕಿರುವ ಆತಂಕವಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಎನ್ಡಿಆರ್ಎಫ್ ತಂಡ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದೆ.