ಭಿಂದ್ (ಮಧ್ಯಪ್ರದೇಶ): ಮಧ್ಯಪ್ರದೇಶ - ಉತ್ತರಪ್ರದೇಶ ಗಡಿಯ ಮಿಹೋನಾ ಪ್ರದೇಶದ ನದಿಯಲ್ಲಿ ಕಚ್ಚಾ ಗ್ರೆನೇಡ್ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉತ್ತರಪ್ರದೇಶದ ಜಲಾನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸ್ಥಳೀಯ ಯುವಕನೊಬ್ಬ ಪಹುಜ್ ನದಿಯಲ್ಲಿ ನಾಣ್ಯಗಳನ್ನು ತೆಗೆಯಲು ಹೋದ ವೇಳೆ ಆತನ ಕೈಗೆ ಕಚ್ಚಾ ಗ್ರೆನೇಡ್ ಸಿಕ್ಕಿದ್ದು, ಗಾಬರಿಯಾಗಿದ್ದಾನೆ. ಆದರೂ, ಸ್ಫೋಟಕ ವಸ್ತು ಹೊರ ತಂದಿದ್ದು, ಸ್ಥಳೀಯರು ಅದನ್ನು ಸೇತುವೆ ಬಳಿ ಎಸೆದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.