ಕರ್ನಾಟಕ

karnataka

ETV Bharat / bharat

ಕೆನಡಾದಲ್ಲಿ ಭಾರತದ ಪೊಲೀಸ್​ ಅಧಿಕಾರಿಯ ಮಗ ಶವವಾಗಿ ಪತ್ತೆ - ಡಿವೈಎಸ್‌ಪಿ

ಕೆನಡಾದಲ್ಲಿ ಗುಜರಾತ್​ನ ಭಾವನಗರ ಜಿಲ್ಲೆಯ ಪೊಲೀಸ್​ ಅಧಿಕಾರಿಯೊಬ್ಬರ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

Bhavnagar DySP Ramesh Dakhras son Suspicious death in Canada
ಕೆನಡಾದಲ್ಲಿ ಭಾರತದ ಪೊಲೀಸ್​ ಅಧಿಕಾರಿಯ ಮಗ ಶವವಾಗಿ ಪತ್ತೆ

By

Published : May 14, 2023, 7:11 PM IST

ಭಾವನಗರ (ಗುಜರಾತ್​): ವಿದ್ಯಾಭ್ಯಾಸಕ್ಕೆಂದು ಕೆನಡಾಕ್ಕೆ ತೆರಳಿದ್ದ ಗುಜರಾತ್​ ರಾಜ್ಯದ ಭಾವನಗರ ಜಿಲ್ಲೆಯ ಪೊಲೀಸ್​ ಅಧಿಕಾರಿಯೊಬ್ಬರ ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೇ 5ರಿಂದ ಕೆನಡಾದಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಇದರಿಂದ ಗುಜರಾತ್​ನಲ್ಲಿರುವ ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ.

ಇದನ್ನೂ ಓದಿ:ಮಹಾರಾಷ್ಟ್ರದ ಅಕೋಲಾದಲ್ಲಿ ಘರ್ಷಣೆ: 8 ಮಂದಿಗೆ ಗಾಯ, ವಾಹನಗಳಿಗೆ ಬೆಂಕಿ, ನಿಷೇಧಾಜ್ಞೆ ಜಾರಿ

ಪಾಲನ್‌ಪುರದಲ್ಲಿ ಡಿವೈಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ದಾಖ್ರಾ ಅವರ ಪುತ್ರ ಆಯುಷ್ ದಾಖ್ರಾ ಮೃತ ಯುವಕ. ಭಾವನಗರದ ಸಿದ್ಸಾರ್‌ ಪ್ರದೇಶದಲ್ಲಿ ವಾಸವಾಗಿದ್ದ ಆಯುಷ್ ದಾಖ್ರಾ ಕಳೆದ ನಾಲ್ಕೂವರೆ ವರ್ಷಗಳ ಹಿಂದೆ ಓದಲು ಕೆನಡಾಕ್ಕೆ ತೆರಳಿದ್ದ. ಮೇ 5ರಂದು ಕಾಲೇಜಿಗೆ ಹೋಗಿದ್ದ. ಆದರೆ, ಮರಳಿ ಬಾರದ ಹಿನ್ನೆಲೆಯಲ್ಲಿ ಒಂದೂವರೆ ದಿನ ಕಳೆದ ಬಳಿಕ ಆತನ ಸ್ನೇಹಿತರು ಭಾರತದಲ್ಲಿರುವ ಯುವಕನ ತಂದೆ ರಮೇಶ್ ದಾಖ್ರಾ ಅವರಿಗೆ ಮಾಹಿತಿ ನೀಡಿದ್ದರು. ಆಗ ರಮೇಶ್ ಕೆನಡಾ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.

ಇದರ ನಂತರ ಕೆನಡಾದ ಪೊಲೀಸರು ಆಯುಷ್ ದಾಖ್ರಾ ಅನುಮಾನಾಸ್ಪದ ಸಾವಿನ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ಆದರೆ, ಕೆನಡಾದಲ್ಲೇ ಈತ ಶವವಾಗಿ ಪತ್ತೆಯಾಗಿದ್ದು, ತವರಿಗೆ ಮೃತದೇಹವನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆದಿದೆ. ಡಿವೈಎಸ್‌ಪಿ ಆಗಿರುವ ರಮೇಶ್ ದಾಖ್ರಾ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ದಾಖ್ರಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದರಲ್ಲಿ ಕಿರಿಯ ಮಗ ಸದ್ಯ ಗಾಂಧಿನಗರದಲ್ಲಿ ಓದುತ್ತಿದ್ದಾನೆ. ನಂತರ ಎರಡನೇ ಮಗ ಆಯುಷ್ ದಖ್ರಾ ಕೆನಡಾದಲ್ಲಿ ಓದಲು ಹೋಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಜೂಜುಕೋರರ ಹಿಡಿಯಲು ಯತ್ನಿಸಿ ಎರಡನೇ ಮಹಡಿಯಿಂದ ಬಿದ್ದು ಎಸ್​ಐ ಸಾವು

ಅಮೆರಿಕದಲ್ಲಿ ತೆಲಂಗಾಣದ ಯುವತಿ ಸಾವು:ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತೆಲಂಗಾಣದ ತಾಟಿಕೊಂಡ ಐಶ್ವರ್ಯಾ ಎಂಬ ಯುವತಿ ಮೃತಪಟ್ಟಿದ್ದರು. ಟೆಕ್ಸಾಸ್‌ನ ಡಲ್ಲಾಸ್‌ನಿಂದ ಉತ್ತರಕ್ಕಿರುವ 25 ಕಿಲೋಮೀಟರ್ ದೂರದಲ್ಲಿರುವ ಅಲೆನ್ ಪ್ರೀಮಿಯರ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದರು. ಇದರಲ್ಲಿ ಐಶ್ವರ್ಯಾ ಕೂಡ ಒಬ್ಬರಾಗಿದ್ದರು.

ಐಶ್ವರ್ಯಾ ಅವರ ತಂದೆ ನರಸಿರೆಡ್ಡಿ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದ ಐಶ್ವರ್ಯಾ ಶಾಪಿಂಗ್​ ಮಾಲ್​ಗೆ ತೆರಳಿದ್ದಾಗ ಕಪ್ಪು ಕಾರಿನಲ್ಲಿ ಬಂದ ದುಷ್ಕರ್ಮಿ ಅಂಗಡಿಗಳ ಹೊರಗಿನಿಂದ ಗುಂಡಿನ ದಾಳಿ ನಡೆಸಿದ್ದ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ದಾಳಿಕೋರನ ಮೇಲೆ ಪ್ರತಿದಾಳಿ ನಡೆಸಿದ್ದರು. ಮತ್ತೊಂದೆಡೆ, ಟೆಕ್ಸಾಸ್‌ನ ಮಾಲ್‌ನಲ್ಲಿ ನಡೆದ ಈ ಗುಂಡಿನ ದಾಳಿ ವೇಳೆ ನೂರಾರು ಜನರು ಓಡಿಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ:ಅಮೆರಿಕದಲ್ಲಿ ಗುಂಡಿನ ದಾಳಿ: ತೆಲಂಗಾಣ ನ್ಯಾಯಾಧೀಶರ ಮಗಳು ಸಾವು

ABOUT THE AUTHOR

...view details