ಕರ್ನಾಟಕದ ಅಗ್ರ ರ್‍ಯಾಂಕರ್ ಮನದಾಳವಿದು! ಸೊಲ್ಲಾಪುರ (ಮಹಾರಾಷ್ಟ್ರ): ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಪಾಸ್ ಆಗಬೇಕು ಎಂದು ಗುರಿ ಇಟ್ಟುಕೊಂಡು ಅದರೆಡೆಗೆ ಪ್ರಯತ್ನಿಸುವುದು ಸುಲಭದ ಮಾತಲ್ಲ. ಅದರಲ್ಲಿ ದೇಶಕ್ಕೆ 100ರ ಒಳಗಿನ ರ್‍ಯಾಂಕ್ ಗಳಿಸಿ ಪಾಸ್ ಆಗಬೇಕಾದರೆ ಅದರ ಹಿಂದಿನ ಶ್ರಮ ದೊಡ್ಡದಾಗಿಯೇ ಇರಬೇಕಾಗುತ್ತದೆ. ಇನ್ನೂ ಉದ್ಯೋಗ ಮಾಡಿಕೊಂಡು ಯುಪಿಎಸ್ಸಿ ಪಾಸ್ ಆಗುವುದೆಂದರೆ ಅದರ ಮೇಲಿನ ಶ್ರದ್ಧೆ ಎಷ್ಟಿರ ಬೇಕು ಎಂದು ನೀವೇ ಯೋಚಿಸಿ. ಏಕೆಂದರೆ ಸೋಲಾಪುರ ಕೇಂದ್ರ ರೈಲ್ವೆ ವಿಭಾಗದಲ್ಲಿ ಸಹಾಯಕ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೂಲದ ಭಾವನ ದೇಶಕ್ಕೆ 55ನೇ ರ್ಯಾಂಕ್ ಗಳಿಸಿದ್ದಾರೆ. ಆದರೆ ಇದು ಕರ್ನಾಟಕ್ಕಕೆ ಪ್ರಥಮ ಸ್ಥಾನವಾಗಿದೆ.
ನಿನ್ನೆ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ 933 ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಸೋಲಾಪುರ ಕೇಂದ್ರ ರೈಲ್ವೆ ವಿಭಾಗದಲ್ಲಿ ಸಹಾಯಕ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭಾವನಾ ಹೆಚ್.ಎಸ್ ಅವರು ದೇಶಕ್ಕೆ 55ನೇ ರ್‍ಯಾಂಕ್ ಗಳಿಸಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಯಾವುದೇ ಸಾಧನೆ ಮಾಡಬೇಕಾದರೆ ಕುಟುಂಬದ ಸಹಕಾರ ಮುಖ್ಯ. ಅವರ ಬೆಂಬಲ ದೊರೆತಲ್ಲಿ ಗುರಿಯತ್ತ ಮುನ್ನಡೆಯಲು ಸಹಕಾರಿಯಾಗುತ್ತದೆ ಆದರೆ ಕರ್ನಾಟಕದ ಯಪಿಎಸ್ಸಿ ಟಾಪರ್ ತನ್ನ ಸಂಪಾದನೆಯಲ್ಲಿ ತಾಯಿಯನ್ನು ನೋಡಿಕೊಂಡು ಇತ್ತ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೂ ತಯಾರಿ ನಡೆಸಿ ಯಶಸ್ವಿಯಾಗಿದ್ದಾರೆ ಭಾವನಾ. ಈ ಸಾಧನೆ ತಾಯಿ ಮತ್ತು ಸ್ನೇಹಿತರ ಸಹಕಾರವನ್ನು ಅವರು ಮುಕ್ತ ಕಂಠದಿಂದ ನೆನೆದಿದ್ದಾರೆ.
ಐದನೇ ಪ್ರಯತ್ನದಲ್ಲಿ ಉದ್ಯೋಗ, ಆರನೇ ಬಾರಿಗೆ ಟಾಪರ್: 2022-23ನೇಯದ್ದು ಭಾವನಾ ಅವರ ಆರನೇ ಪ್ರಯತ್ನವಾಗಿದೆ. ಮೊದಲ ಎರಡು ಪ್ರಯತ್ನಗಳಲ್ಲಿ ಭಾವನಾಗೆ ಯಾವುದೇ ಹುದ್ದೆ ಸಿಗಲಿಲ್ಲ. 2015 ಮತ್ತು 2016ರಲ್ಲಿ ಭಾವನಾ ಭೌಗೋಳಿಕ ವಿಷಯದ ಪೂರ್ವ ಪರೀಕ್ಷೆಗಳನ್ನು ಎದುರಿಸಿದ್ದರು. 2018 ರಲ್ಲಿ ಸಂದರ್ಶನದ ವರೆಗೆ ಹೋದ ಅವರಿಗೆ ಭಾರತೀಯ ರೈಲ್ವೆ ಸಂಚಾರ ಸೇವಾ ವಿಭಾಗದಲ್ಲಿ ಉದ್ಯೋಗ ದೊರಕಿತ್ತು. ಕೆಲಸ ಸಿಕ್ಕರೂ ಯುಪಿಎಸ್ಸಿಯ ಹಟ ಬಿಡದ ಭಾವನಾ 2022 ರಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ 55 ನೇ ರ್ಯಾಂಕ್ ಗಳಿಸಿದ್ದಾರೆ.
ಸೋಲಾಪುರ ಸೆಂಟ್ರಲ್ ರೈಲ್ವೇ ವಿಭಾಗದಲ್ಲಿ ಕೆಲಸ: ಸೋಲಾಪುರ ಸೆಂಟ್ರಲ್ ರೈಲ್ವೇ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಭಾವನಾ ಬೆಂಗಳೂರು ಜಿಲ್ಲೆಯವರು, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್‌ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ 2015ರಿಂದ ಕೇಂದ್ರ ಲೋಕಸೇವಾ ಆಯೋಗದಲ್ಲಿ ವ್ಯಾಸಂಗ ಆರಂಭಿಸಿದರು. ತಂದೆ ಇಲ್ಲದ ಕಾರಣ ಕುಟುಂಬದ ಪರಿಸ್ಥಿತಿ ಸಂಕಷ್ಟದಲ್ಲಿತ್ತು. ಆದರೆ ಭಾವನಾ ಅವರ ಓದಿಗೆ ಅವರ ಚಿಕ್ಕಪ್ಪ ಆಸರೆಯಾಗಿದ್ದರು. ದುರಾದೃಷ್ಟ ಎಂದರೆ ಚಿಕ್ಕಪ್ಪ ಕೋವಿಡ್ ಸಂದರ್ಭದಲ್ಲಿ ನಿಧನರಾದರು. ಆದರೆ, ಯಪಿಎಸ್ಸಿ ಓದಿಗೆ ಚಿಕ್ಕಪ್ಪ ಕೊಟ್ಟ ಅಮೂಲ್ಯ ಸಹಕಾರವನ್ನು ಮನಃಪೂರ್ವಕವಾಗಿ ಭಾವನಾ ನೆನೆದಿದ್ದಾರೆ.
ಭಾವನಾ 55 ನೇ ಸ್ಥಾನವನ್ನು ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಅಗ್ರಸ್ಥಾನದಲ್ಲಿದ್ದಾರೆ, ದೇಶದಲ್ಲೇ ಐಎಎಸ್ಗೆ ಮೊದಲ ಆಯ್ಕೆಯಾಗಿದ್ದು, ಯಾವುದೇ ಕೋಚಿಂಗ್ ಇಲ್ಲದೇ ಈ ಯಶಸ್ವಿಯಾಗಿದ್ದಾರೆ. ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ, ಸ್ವಯಂ ಅಧ್ಯಯನ ಮಾಡುವಂತೆ ಸಲಹೆ ನೀಡಿದ್ದಾರೆ. ಕೋಚಿಂಗ್ ಸಂಸ್ಥೆಗಳು ಸಹಾಯ ಮಾಡಬಹುದು ಆದರೆ ಉತ್ತೀರ್ಣರಾಗುವುದರಲ್ಲಿ ನಮ್ಮ ಜವಾಬ್ದಾರಿ ಹೆಚ್ಚು ಎನ್ನುವುದು ಅವರ ಗಟ್ಟಿ ನಂಬಿಕೆ.
ಇದನ್ನೂ ಓದಿ:ಶಿಕ್ಷಣ - ಮಹಿಳಾ ಸಬಲೀಕರಣ ಎರಡು ನನ್ನ ಆಸಕ್ತಿಯ ಕ್ಷೇತ್ರ: ನೂಕಲಾ ಉಮಾ ಹರತಿ