ಕರ್ನಾಟಕ

karnataka

ETV Bharat / bharat

ಸದನಕ್ಕೆ ಹಾಜರಾಗುವಂತೆ ಬಿಜೆಪಿ ಲೋಕಸಭಾ ಸದಸ್ಯರಿಗೆ ವಿಪ್​ ಜಾರಿ - Bharatiya Janata Party has issued a three-line whip

ಇಂದು ಕೇಂದ್ರ ಬಜೆಟ್ ಕುರಿತು ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಲೋಕಸಭಾ ಸದಸ್ಯರಿಗೆ ಇಂದು ಸದನದಲ್ಲಿ ಹಾಜರಾಗಲು ವಿಪ್​ ಜಾರಿ ಮಾಡಿದೆ.

ಸದನಕ್ಕೆ ಹಾಜರಾಗುವಂತೆ ಬಿಜೆಪಿ ಲೋಕಸಭಾ ಸದಸ್ಯರಿಗೆ ವಿಪ್​ ಜಾರಿ
ಸದನಕ್ಕೆ ಹಾಜರಾಗುವಂತೆ ಬಿಜೆಪಿ ಲೋಕಸಭಾ ಸದಸ್ಯರಿಗೆ ವಿಪ್​ ಜಾರಿ

By

Published : Feb 10, 2021, 1:27 PM IST

ನವದೆಹಲಿ:ಬಿಜೆಪಿ ತನ್ನ ಲೋಕಸಭಾ ಸದಸ್ಯರಿಗೆ ಇಂದು ಸದನದಲ್ಲಿ ಹಾಜರಾಗಲು ಮತ್ತು ಸರ್ಕಾರದ ನಿಲುವನ್ನು ಬೆಂಬಲಿಸುವಂತೆ ಮೂರು ಸಾಲಿನ ವಿಪ್​ ಜಾರಿ ಮಾಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಕೇಂದ್ರ ಬಜೆಟ್ ಕುರಿತು ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಲೋಕಸಭೆಯು ಕೈಗೆತ್ತಿಕೊಳ್ಳುವ ಚರ್ಚೆಯಲ್ಲಿ ತಮ್ಮ ಪಕ್ಷದಿಂದ ಮೊದಲು ಭಾಷಣ ಮಾಡಲಿದ್ದಾರೆ.

ರಾಷ್ಟ್ರಪತಿಗಳ ಭಾಷಣಕ್ಕೆ ಪ್ರಧಾನಿ ಮೋದಿ ವಂದನಾ ನಿರ್ಣಯಕ್ಕೆ ಉತ್ತರಿಸಿದ ನಂತರ ಕೇಂದ್ರ ಬಜೆಟ್ 2021-22ರ ಕುರಿತು ಚರ್ಚೆಯನ್ನು ಕೈಗೊಳ್ಳಲಾಗುವುದು.

ಬಜೆಟ್ ಅಧಿವೇಶನದ ಮೊದಲ ಭಾಗ ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ.

ABOUT THE AUTHOR

...view details