ಮಧುರೈ:ವೇದಿಕೆಯ ಮೇಲೆ ಭರತನಾಟ್ಯ ಮಾಡುತ್ತಲೇ ಕಲಾವಿದನೊಬ್ಬ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಕಾಳಿದಾಸ್(50) ಮೃತಪಟ್ಟ ಕಲಾವಿದರು. ಮಧುರೈನ ದೇವಸ್ಥಾನವೊಂದರಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಳಿದಾಸ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮದ ಅರ್ಧದಲ್ಲಿ ಸುಸ್ತಾಗಿ ನೃತ್ಯ ಮಾಡುವುದನ್ನು ನಿಲ್ಲಿಸಿ ವೇದಿಕೆಯ ಪಕ್ಕಕ್ಕೆ ಸರಿದಿದ್ದಾರೆ.
ಈ ವೇಳೆ ಅವರು ಹೃದಯಾಘಾತದ ಮುನ್ಸೂಚನೆ ಪಡೆದಿದ್ದಾರೆ. ಬಳಿಕ ಅಲ್ಲಿಯೇ ಇದ್ದವರಲ್ಲಿ ನೀರು ಕೇಳಿ ಪಡೆದು ಕುಡಿದಿದ್ದಾರೆ. ಬಳಿಕ ವೇದಿಕೆ ಮುಂಭಾಗ ಕುಳಿತುಕೊಂಡಿದ್ದಾರೆ. ಸಂಗೀತ, ನೃತ್ಯದಿಂದ ಮೈಮರೆತಿದ್ದ ಜನರು ಕಾಳಿದಾಸ್ ಕುಳಿತಿರುವುದನ್ನು ಗಮನಿಸಿಲ್ಲ.