ನವದೆಹಲಿ: ಉತ್ತರ ಭಾರತದಲ್ಲಿ ಶೀತ ಗಾಳಿ ಮುಂದುವರೆದಿದೆ. ಕೆಲವೆಡೆ ಬೆಟ್ಟ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸಿದೆ. ಹರಿಯಾಣ ಮತ್ತು ಹಿಸಾರ್‌ನ ಕೆಲವು ಭಾಗಗಳು ಶೂನ್ಯ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಭಾರತ ಹವಾಮಾನ ಇಲಾಖೆಯ (ಐಎಂಡಿ) ಪ್ರಕಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹಿಮಪಾತವಾಗಿದೆ. ಪಶ್ಚಿಮ ಹಿಮಾಲಯದಿಂದ ಶೀತ ಮತ್ತು ಶುಷ್ಕ ಈಶಾನ್ಯ ಮತ್ತು ವಾಯುವ್ಯ ಮಾರುತಗಳಿಂದ ಉತ್ತರ ಭಾರತದಲ್ಲಿ ಕನಿಷ್ಟ ತಾಪಮಾನ ವರದಿಯಾಗಿದೆ.
ಚಳಿಗೆ ನಡುಗಿದ ನವದೆಹಲಿ
ಶೀತ ಗಾಳಿಯಿಂದ ರಾಷ್ಟ್ರ ರಾಜಧಾನಿ ಸಹ ತತ್ತರಿಸಿದ್ದು, ದೆಹಲಿಯಲ್ಲಿ ಕನಿಷ್ಠ ತಾಪಮಾನ 3.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸಫ್ದರ್ಜಂಗ್ ವೀಕ್ಷಣಾಲಯದಲ್ಲಿ ಕನಿಷ್ಠ 3.6 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 18.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಅಯನಗರ ಮತ್ತು ಲೋಧಿ ರಸ್ತೆಯ ಹವಾಮಾನ ಕೇಂದ್ರಗಳು ಕ್ರಮವಾಗಿ 2.6 ಡಿಗ್ರಿ ಸೆಲ್ಸಿಯಸ್ ಮತ್ತು 2.7 ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ. ಬಯಲು ಪ್ರದೇಶದಲ್ಲಿ, ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೆ ಹವಾಮಾನ ಇಲಾಖೆ ಇದನ್ನು ಶೀತ ಗಾಳಿ ಎಂದು ಘೋಷಿಸಲಿದೆ. ಕನಿಷ್ಠ 2 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಶೀತ ಗಾಳಿ ಬೀಸುತ್ತವೆ.
ಓದಿ: ಭಾರತ-ಬ್ರಿಟನ್ ನಡುವೆ ವಿಮಾನ ಸಂಚಾರ ಬಂದ್
ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ
ತಾಪಮಾನ ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯಬಹುದು. ಇದರಿಂದ ಶೀತ ಗಾಳಿಯು ಉಲ್ಬಣಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶ್ರೀನಗರದಲ್ಲಿ ಹಿಮಪಾತ
ನೆರೆಯ ಬುಡ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳ ಬಳಿಕ ಶ್ರೀನಗರದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಹಿಮಪಾತ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕಾಶ್ಮೀರದ ಗುಲ್ಮಾರ್ಗ್ನ ಸ್ಕೀ-ರೆಸಾರ್ಟ್ ಏಳು ಇಂಚು ಹಿಮಪಾತವಾಗಿದೆ. ದಕ್ಷಿಣದ ಪಹಲ್ಗಮ್ ರೆಸಾರ್ಟ್ ಮತ್ತು ಮಧ್ಯ ಕಾಶ್ಮೀರದ ಸೋನಮಾರ್ಗ್ ರೆಸಾರ್ಟ್ಗಳಲ್ಲಿ ತಲಾ 3-4 ಇಂಚುಗಳಷ್ಟು ಹಿಮಪಾತ ಸಂಭವಿಸಿದೆ.
ದೇಶೀಯ ಪ್ರವಾಸಿಗರು ಮತ್ತು ಸ್ಥಳೀಯರು ಗುಲ್ಮಾರ್ಗ್ ಮತ್ತು ಪಹಲ್ಗಮ್ಗೆ ಭೇಟಿ ನೀಡುತ್ತಿದ್ದು, ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ವ್ಯಾಪಾರಿಗಳು ಕೊಂಚ ಸಮಾಧಾನ ಪಡುವಂತಾಗಿದೆ.
ಓದಿ: ಹಿಮವೆಲ್ಲಾ ಕಲ್ಲಾದವೋ! ಶಿಮ್ಲಾದಲ್ಲಿ -1 ಡಿಗ್ರಿ ಸೆಲ್ಸಿಯಸ್ ತಾಪಮಾನ
ಮೈನಸ್ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
ಶಿಮ್ಲಾದಲ್ಲಿ -1 ಡಿಗ್ರಿ ಸೆಲ್ಸಿಯಸ್, ಪಹಲ್ಗಮ್ -3 ಡಿಗ್ರಿ ಸೆಲ್ಸಿಯಸ್, ಗುಲ್ಮಾರ್ಗ್ನಲ್ಲಿ -7.5 ಡಿಗ್ರಿ ಸೆಲ್ಸಿಯಸ್, ಖಾಜಿಗುಂಡ್ನಲ್ಲಿ -0.4 ಡಿಗ್ರಿ ಸೆಲ್ಸಿಯಸ್, ಕುಪ್ವಾರಾದಲ್ಲಿ -1 ಡಿಗ್ರಿ ಸೆಲ್ಸಿಯಸ್ ಮತ್ತು ಕೊಕರ್ನಾಗ್ನಲ್ಲಿ -3 ಡಿಗ್ರಿ ಸೆಲ್ಸಿಯಸ್, ಡಾಲ್ಹೌಸಿ, ಮನಾಲಿ, ಕುಫ್ರಿ, ಸಿಯೋಬಾಗ್, ಸೋಲನ್ ಮತ್ತು ಭುಂಟಾರ್‌ನಲ್ಲಿ ಕನಿಷ್ಠ ತಾಪಮಾನವು ಕ್ರಮವಾಗಿ -2.9, -2.6, -0.2, -1.5, - 0.4 ಮತ್ತು -0.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.