ನವದೆಹಲಿ: ಮಲೇಷ್ಯಾದಲ್ಲಿ ನೆಲೆಸಿರುವ ಭಾರತ ಮೋಸ್ಟ್ ವಾಟೆಂಡ್ ಇಸ್ಲಾಮಿಕ್ ಧರ್ಮ ಬೋಧಕ ಝಾಕಿರ್ ನಾಯಕ್ ತನ್ನ ಮೂಲಭೂತವಾದಿ ಇಸ್ಲಾಮಿಕ್ ಚಟುವಟಿಕೆಯನ್ನು ಮುಂದುವರೆಸಿದ್ದು, ಕೊಲ್ಲಿ ರಾಷ್ಟ್ರಗಳ ಶ್ರೀಮಂತರನ್ನು ಸಂಪರ್ಕಿಸಿ ಹಣ ಸಂಗ್ರಹಣೆಯಲ್ಲಿ ನಿರತನಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಮೋಸ್ಟ್ ವಾಂಟೆಡ್ ಝಾಕಿರ್ ನಾಯಕ್ಗೆ ಗಲ್ಫ್ ರಾಷ್ಟ್ರಗಳಿಂದ ಬರ್ತಿದೆ ಭರಪೂರ ಹಣ - ಹಣ ಸಂಗ್ರಹದಲ್ಲಿ ನಿರತನಾಗಿದ್ದಾನಂತೆ ಝಾಕಿರ್ ನಾಯಕ್
ಭಾರತ ವಿವಾದಿತ ಇಸ್ಲಾಮಿಕ್ ಧರ್ಮ ಬೋಧಕ ಝಾಕಿರ್ ನಾಯಕ್ ಮಲೇಷ್ಯಾದಲ್ಲಿದ್ದುಕೊಂಡು ತನ್ನ ಕಾರ್ಯ ಚಟುವಟಿಕೆಯನ್ನು ಮುಂದುವರೆಸಿದ್ದಾನೆ ಎನ್ನಲಾಗಿದ್ದು. ಗಲ್ಫ್ ರಾಷ್ಟದ ಪ್ರಜೆಯನ್ನು ಸಂಪರ್ಕಿಸಿ ಧನ ಸಹಾಯಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಇತ್ತೀಚೆಗೆ ದೊರೆತಿರುವ ಮಾಹಿತಿ ಪ್ರಕಾರ ನಾಯಕ್ ತನ್ನ ಹಳೆಯ ಸಂಪರ್ಕದಲ್ಲಿ ಒಂದಾಗಿರುವ ಖತಾರ್ ಪ್ರಜೆ ಅಬ್ದುಲ್ಲಾ ಅಲೀ ಅಲ್ ಇಮಾದಿಯನ್ನು ಸಂಪರ್ಕಿಸಿ ರಂಜಾನ್ ತಿಂಗಳಲ್ಲಿ ಧಾನ ನೀಡುವಂತೆ ಕೇಳಿಕೊಂಡಿದ್ದಾನಂತೆ. ನಾಯಕ್ ಮನವಿಗೆ ಸ್ಪಂದಿಸಿರುವ ಇಮಾದಿ, 5 ಲಕ್ಷ ಡಾಲರ್ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಖತಾರ್ ಪ್ರಜೆಯಾದ ಮೊಹಮ್ಮದ್ ಸಿದ್ದೀಕ್ ಅಲ್ ಇಮಾದಿಯೊಂದಿಗೆ ನಾಯಕ್ ನಿಕಟ ಸಂಪರ್ಕದಲ್ಲಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಶ್ರೀಮಂತ ಉದ್ಯಮಿಗಳಿಂದ ಧನ ಸಂಗ್ರಹ ಮಾಡಲು ನಾಯಕ್ ಈತನ ಸಹಾಯ ಪಡೆಯುತ್ತಿದ್ದಾನೆ.
ಮುಂಬೈ ಮೂಲದ ಝಾಕಿರ್ ನಾಯಕ್ ಮೂಲಭೂತವಾದಿ ಇಸ್ಲಾಮಿಕ್ ನಾಯಕನಾಗಿದ್ದು, ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್ಎಫ್) ಸೌದಿ ಅರೇಬಿಯಾದಲ್ಲಿ ಮುಖ್ಯ ಕಚೇರಿ ಹೊಂದಿರುವ ಉರ್ದು ಮತ್ತು ಇಂಗ್ಲಿಷ್ ಭಾಷೆಯ ಪೀಸ್ ಟಿವಿ ಚಾನಲ್ ಈತನ ಒಡೆತನದ್ದಾಗಿದೆ. ಇದರ ಜೊತೆಗೆ ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ( ಎಸ್ಕೆಎಸ್ಎಂ) ಮತ್ತು ಅಲ್-ಲಿಸಾನ್ ಇಸ್ಲಾಮಿಕ್ ಫೌಂಡೇಶನ್ ಜೊತೆ ಈತ ಸಂಪರ್ಕ ಹೊಂದಿದ್ದಾನೆ.