ಕರ್ನಾಟಕ

karnataka

ETV Bharat / bharat

ಜಾಕೀರ್​​ ನಾಯಕ್​ ಹಸ್ತಾಂತರ ವಿಷಯ: ಭಾರತ-ಮಲೇಷಿಯಾ ನಡುವೆ ದ್ವಂದ್ವ ನೀತಿ! - ಪ್ರಧಾನಿ ಮಹತೀರ್​ ಮೊಹಮ್ಮದ್

ಭಾರತಕ್ಕೆ ಬೇಕಾಗಿರುವ ಜಾಕೀರ್​​ ನಾಯಕ್​ ಹಸ್ತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಮಲೇಷಿಯಾ ಭೇಟಿ ನೀಡಿದ್ದ ವೇಳೆ ನಮ್ಮೊಂದಿಗೆ ಯಾವುದೇ ರೀತಿಯ ಪ್ರಸ್ತಾವನೆ ಸಲ್ಲಿಕೆ ಮಾಡಿಲ್ಲ ಎಂದು ಅಲ್ಲಿನ ಪ್ರಧಾನಿ ಹೇಳಿಕೆ ನೀಡಿದ್ದಾರೆ.

ಜಾಕೀರ್​ ನಾಯಕ್​

By

Published : Sep 26, 2019, 7:07 PM IST

ನವದೆಹಲಿ:ಅಕ್ರಮ ಹಣ ಸಾಗಾಣೆ ಹಾಗೂ ಭಯೋತ್ಪಾದನೆ ಕೃತ್ಯಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ಜಾಕೀರ್​ ನಾಯಕ್​​​ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತ ನಮಗೆ ಯಾವುದೇ ರೀತಿಯಲ್ಲಿ ಮನವಿ ಸಲ್ಲಿಕೆ ಮಾಡಿಲ್ಲ ಎಂದು ಅಲ್ಲಿನ ಪ್ರಧಾನಿ ಮಹತೀರ್​ ಮೊಹಮ್ಮದ್ ಇದೀಗ ಹೇಳಿಕೆ ನೀಡಿದ್ದಾರೆ.

94 ವರ್ಷದ ಮಲೇಷಿಯಾದ ಪ್ರಧಾನಿ ರೇಡಿಯೋ ಸ್ಟೇಷನ್​​ನಲ್ಲಿ ಮಾತನಾಡುತ್ತಿದ್ದ ವೇಳೆ ಈ ಕುರಿತು ಹೇಳಿಕೆ ನೀಡಿದ್ದು, ಭಾರತಕ್ಕೆ ಬೇಕಾಗಿರುವ ಜಾಕೀರ್‌ ನಾಯಕ್‌ನನ್ನು ತನ್ನ ವಶಕ್ಕೆ ಒಪ್ಪಿಸಬೇಕೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಜೊತೆ ಚರ್ಚಿಸಿಲ್ಲ ಎಂದು ಅವರು ಇದೀಗ ತಿಳಿಸಿದ್ದಾರೆ.

ಹಲವು ದೇಶಗಳಿಗೆ ಜಾಕೀರ್​ ನಾಯಕ್​ ಬೇಕಾಗಿಲ್ಲ. ನಾನು ಪ್ರಧಾನಿ ಮೋದಿಯವರನ್ನ ಈ ಹಿಂದೆ ಭೇಟಿ ಮಾಡಿದಾಗ ಅವರು ಈತನಿಗಾಗಿ ಯಾವುದೇ ರೀತಿಯ ಕೋರಿಕೆ ಮಂಡನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್​​ 5ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮೊಹಮ್ಮದ್​ ಭೇಟಿಯಾಗಿದ್ದರು. ಈ ವೇಳೆ ಪ್ರಧಾನಮಂತ್ರಿಗಳ ದ್ವಿಪಕ್ಷೀಯ ಮಾತುಕತೆ ಕುರಿತು ಸುದ್ದಿಗಾರರಿಗೆ ವಿವರಣೆ ನೀಡಿದ್ದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ , ‘ಜಾಕೀರ್​ ನಾಯಕ್‌ ಹಸ್ತಾಂತರ ಕುರಿತು ಮೋದಿ ಅಲ್ಲಿನ ಪ್ರಧಾನಿ ಜತೆ ಚರ್ಚಿಸಿದ್ದಾರೆ ಎಂದು ತಿಳಿಸಿದ್ದರು. ಆದರೆ ಇದೀಗ ವಿವಾದಿತ ಮುಸ್ಲಿಂ ಧರ್ಮ ಪ್ರಚಾರಕನ ಹಸ್ತಾಂತರಕ್ಕೆ ಭಾರತದಿಂದ ನಮಗೆ ಯಾವುದೇ ರೀತಿಯ ಮನವಿ ಬಂದಿಲ್ಲ. ಈ ಕುರಿತು ನವದೆಹಲಿಯಿಂದ ಅಧಿಕೃತ ನೋಟಿಸ್‌ ಮಾತ್ರ ತಲುಪಿದೆ ಎಂದು ಮಹತೀರ್‌ ತಿಳಿಸಿದ್ದಾರೆ.

53 ವರ್ಷದ ಮುಸ್ಲಿಂ ಧರ್ಮ ಪ್ರಚಾರಕ ಜಾಕೀರ್​ ನಾಯಕ್‌, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ ಆರೋಪದಿಂದಾಗಿ 2016ರಲ್ಲಿ ಭಾರತ ಬಿಟ್ಟು ಹೋಗಿದ್ದು,ಇದೀಗ ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದಾನೆ. ಜಾಕೀರ್​ ನಾಯಕ್​ ನಮ್ಮ ದೇಶದ ಪೌರನಲ್ಲ. ಈ ಹಿಂದಿನ ಸರ್ಕಾರ ಆತನಿಗೆ ಪೌರತ್ವ ನೀಡಿದೆ ಎಂದು ಮಹತೀರ್​ ಇದೇ ವೇಳೆ ತಿಳಿಸಿದ್ದಾರೆ.

ABOUT THE AUTHOR

...view details