ಕರ್ನಾಟಕ

karnataka

ETV Bharat / bharat

ಜಹೀರ್​ ಯಶಸ್ಸಿನ ಪ್ರಯಾಣ ಅವರ ಶಕ್ತಿ ತೋರಿಸುತ್ತದೆ.. ವಿವಿಎಸ್​ ಲಕ್ಷ್ಮಣ್​ - ಜಹೀರ್​ ಖಾನ್​

ಜಹೀರ್​ ಸರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಎಡಗೈ ಬ್ಯಾಟ್ಸ್​ಮನ್​‌ಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರು ರಿವರ್ಸ್-ಸ್ವಿಂಗ್ ಕಲೆಯಲ್ಲಿ ಪರಿಣಿತರಾಗಿದ್ದರು ಮತ್ತು 2011ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಎಂದು ವಿವಿಎಸ್​ ಲಕ್ಷ್ಮಣ್​ ಸ್ಮರಿಸಿದ್ದಾರೆ.

VVS Laxman
ವಿ.ವಿ.ಎಸ್.ಲಕ್ಷ್ಮಣ್

By

Published : Jun 8, 2020, 10:19 PM IST

ಹೈದರಾಬಾದ್​ : ಭಾರತದ ಅಂತ್ಯಂತ ಪರಿಣಿತ ವೇಗದ ಬೌಲರ್​ಗಳಲ್ಲಿ ಜಹೀರ್​​ ಖಾನ್​ ಕೂಡ ಒಬ್ಬರಾಗಿದ್ದಾರೆ ಎಂದುಭಾರತದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್‌ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಮೇಲೆ ಅಪಾರ ಪ್ರಭಾವ ಬೀರಿದ ತನ್ನ ತಂಡದ ಆಟಗಾರರಿಗೆ ಗೌರವ ಸಲ್ಲಿಸುವ ಪ್ರಯತ್ನದ ಭಾಗವಾಗಿ ಕಲಾತ್ಮಕ ಬ್ಯಾಟ್ಸ್‌ಮನ್‌ ಲಕ್ಷ್ಮಣ್, ಜಹೀರ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

"ದೊಡ್ಡ ಕನಸು ಕಾಣುವ, ಧೈರ್ಯಶಾಲಿ ಮತ್ತು ಆ ಕನಸುಗಳನ್ನು ಬೆನ್ನಟ್ಟಲು ಧೃಡ ಸಂಕಲ್ಪ ಮಾಡಿದ್ದ, ಶ್ರೀರಾಂಪುರದಿಂದ ಯಶಸ್ಸಿನ ಎತ್ತರಕ್ಕೆ ಬೆಳೆದ ಜಹೀರ್​ ಅವರ ಪ್ರಯಾಣದ ಪಾತ್ರ ಅವರ ಬಲವನ್ನು ವಿವರಿಸುತ್ತದೆ. ವೋರ್ಸೆಸ್ಟರ್‌ನಲ್ಲಿ ಕೌಂಟಿ ಮೂಲಕ ವೃತ್ತಿ ಜೀವನ ಆರಂಭಿಸಿದ ಜಹೀರ್​ ತನ್ನನ್ನು ತಾನು ಕಂಫರ್ಟ್​​ ಜೋನ್​ನಲ್ಲಿರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು" ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

ಜಹೀರ್​ ಸರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಎಡಗೈ ಬ್ಯಾಟ್ಸ್​ಮನ್​‌ಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರು ರಿವರ್ಸ್-ಸ್ವಿಂಗ್ ಕಲೆಯಲ್ಲಿ ಪರಿಣಿತರಾಗಿದ್ದರು ಮತ್ತು 2011 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.

ಜಹೀರ್​ 2000ದಲ್ಲಿ ನಡೆದ ಐಸಿಸಿ ನಾಕೌಟ್ ಕಪ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಆಶಿಶ್ ನೆಹ್ರಾ ಮತ್ತು ಜಾವಗಲ್ ಶ್ರೀನಾಥ್ ಅವರೊಂದಿಗೆ 2003ರ ವಿಶ್ವಕಪ್ ಸಮಯದಲ್ಲಿ ಭಾರತದ ವೇಗದ ದಾಳಿಗೆ ಬಲ ನೀಡಿದ್ದರು.

ಜಹೀರ್​ ಭಾರತದ ಪರ 92 ಟೆಸ್ಟ್, 200 ಏಕದಿನ ಮತ್ತು 17 ಟಿ-20 ಪಂದ್ಯಗಳನ್ನು ಆಡಿದ್ದು, ಎಲ್ಲಾ ಮೂರು ಫಾರ್ಮ್ಯಾಟ್​​ಗಳಿಂದ 601 ವಿಕೆಟ್ ಕಬಳಿಸಿದ್ದರು. ಜಹೀರ್ 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೊಂದುವ ಮೂಲಕ ಮೊಹಮ್ಮದ್ ಶಮಿಯಂತಹ ಯುವಕರಿಗೆ ದಾರಿ ಮಾಡಿಕೊಟ್ಟರು.

ABOUT THE AUTHOR

...view details