ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು 50 ಲಕ್ಷ ರೂಪಾಯಿಯನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾರೆ. ಇದರ ಜೊತೆಗೆ ಕೊರೊನಾ ಮಹಾಮಾರಿಯ ವಿರುದ್ಧ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕೆಂದು ಮನವಿ ಮಾಡಿದ್ದಾರೆ.
ಪಿಎಂ ಕೇರ್ಸ್ಗೆ 50 ಲಕ್ಷ ನೀಡಿದ ಯುವಿ: ಕೊರೊನಾ ವಿರುದ್ಧ ಸಮರಕ್ಕೆ ಒಗ್ಗೂಡಲು ಮನವಿ - ಯುವರಾಜ್ ಸಿಂಗ್
ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರ್ಕಾರಕ್ಕೆ ಅನೇಕ ಗಣ್ಯರು ಸಹಾಯಹಸ್ತ ಚಾಚುತ್ತಿದ್ದಾರೆ. ಈ ಪಟ್ಟಿಗೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಸೇರ್ಪಡೆಯಾಗಿದ್ದಾರೆ.
ಯುವರಾಜ್ಸಿಂಗ್
''ನಾವು ಒಗ್ಗಟ್ಟಾಗಿದ್ದಾಗ ಬಲಶಾಲಿಗಳಾಗುತ್ತೇವೆ. ಇಂದು ರಾತ್ರಿ 9 ಗಂಟೆಗೆ ನಾನು 9 ನಿಮಿಷಗಳ ಕಾಲ ಮೇಣದ ಬತ್ತಿ ಹಚ್ಚುತ್ತೇನೆ. ನೀವೂ ನನ್ನ ಜೊತೆ ಇರುತ್ತೀರಿ ಅಲ್ಲವೇ..?'' ಎಂದು ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿ ಜನರನ್ನು ಪ್ರೇರೇಪಿಸಿದ್ದಾರೆ.
ಜೊತೆಗೆ ''ನಾನು ಪಿಎಂ ಕೇರ್ಸ್ಗೆ 50 ಲಕ್ಷ ರೂಪಾಯಿ ನೀಡಿದ್ದು ನೀವೂ ಕೂಡಾ ನಿಮ್ಮ ಕೈಲಾದ ಸಹಾಯ ಮಾಡಿ'' ಎಂದು ತಮ್ಮ ಟ್ವಿಟ ರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.