ಅಮರಾವತಿ : ಆಂಧ್ರಪ್ರದೇಶದ ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿಜಯನಗರಂ ಜಿಲ್ಲೆಯ ಶಾಸಕರೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಮೂಲಕ ಮೊದಲ ಬಾರಿಗೆ ರಾಜ್ಯದಲ್ಲಿ ಶಾಸಕರೊಬ್ಬರು ಸೋಂಕಿಗೆ ತುತ್ತಾಗಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಶಾಸಕನಿಗೂ ಕೋವಿಡ್ ಪಾಸಿಟಿವ್ - ಆಂಧ್ರ ಪ್ರದೇಶದ ಶಾಸಕನಿಗೆ ಕೋವಿಡ್ ಪಾಸಿಟಿವ್
ಆಂಧ್ರಪ್ರದೇಶದ ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಕಳೆದ ವಾರ ಅಮರಾವತಿಯಲ್ಲಿ ನಡೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶಾಸಕರು ಪಾಲ್ಗೊಂಡಿದ್ದರು.
ವೈಎಸ್ಆರ್ ಕಾಂಗ್ರೆಸ್ ಶಾಸಕನಿಗೆ ಕೋವಿಡ್ ಪಾಸಿಟಿವ್
ಶಾಸಕರ ಜೊತೆಗೆ ಅವರ ವೈಯುಕ್ತಿಕ ಭದ್ರತಾ ಸಿಬ್ಬಂದಿಗೂ ಸೋಂಕು ತಗುಲಿದೆ. ಶಾಸಕರು ಇತ್ತೀಚೆಗೆ ಯುಎಸ್ಗೆ ಹೋಗಿ ವಾಪಸ್ ಆಗಿ ಕೆಲ ದಿನಗಳ ಕಾಲ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದರು. ಬಳಿಕ ನಡೆಸಿದ ಪರೀಕ್ಷೆಯಲ್ಲಿ ಶಾಸಕರು ಮತ್ತು ಅವರ ಗನ್ ಮ್ಯಾನ್ಗೂ ಸೋಂಕು ದೃಢಪಟ್ಟಿದೆ.
ಕಳೆದ ವಾರ ಅಮರಾವತಿಯಲ್ಲಿ ನಡೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶಾಸಕರು ಪಾಲ್ಗೊಂಡಿದ್ದರು.