ಕರ್ನಾಟಕ

karnataka

ETV Bharat / bharat

ಒಂದಲ್ಲ ಎರಡಲ್ಲ ಆಂಧ್ರಕ್ಕೆ ಮೂರು ರಾಜಧಾನಿ: ಬಿಲ್​ ಮಂಡನೆ ಮಾಡಿದ ಸಿಎಂ ಜಗನ್​ ಮೋಹನ್​

ಆಂಧ್ರಪ್ರದೇಶ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ಮಾಡುವಂತೆ ಸಿಎಂ ಜಗನ್​ ಮೋಹನ್​ ರೆಡ್ಡಿ ಮಸೂದೆ ಮಂಡನೆ ಮಾಡಿದ್ದಾರೆ.

YS Jaganmohan Reddy
ಜಗನ್​ ಮೋಹನ್

By

Published : Jan 20, 2020, 1:33 PM IST


ಆಂಧ್ರಪ್ರದೇಶ:ಎಲ್ಲಾ ರಾಜ್ಯಗಳಿಗೂ ಒಂದೊಂದೇ ರಾಜಧಾನಿ ಇರುವುದು. ಆದರೆ ಆಂಧ್ರಪ್ರದೇಶ ರಾಜ್ಯದಲ್ಲಿ 3 ನಗರಗಳನ್ನು ರಾಜಧಾನಿಗಳನ್ನಾಗಿಸಲು ಮುಖ್ಯಮಂತ್ರಿ ವೈ.ಎಸ್​​.ಜಗನ್​​ಮೋಹನ್​​ ರೆಡ್ಡಿ ಚಿಂತನೆ ನಡೆಸಿದ್ದಾರೆ.

ರಾಜ್ಯದಲ್ಲಿ ವಿಶೇಷ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ, ಜಗನ್​ ಮೋಹನ್​​ ರೆಡ್ಡಿ ಸದನದಲ್ಲಿ ಈ ಯೋಜನೆಯ ಬಗ್ಗೆ ಮಸೂದೆ ಮಂಡಿಸಿದ್ದು, ಕಾರ್ಯಾಂಗದ ರಾಜಧಾನಿಯಾಗಿ ವಿಶಾಖಪಟ್ಟಣ, ಶಾಸಕಾಂಗದ ರಾಜಧಾನಿಯಾಗಿ ಅಮರಾವತಿ ಹಾಗೂ ನ್ಯಾಯಾಂಗದ ರಾಜಧಾನಿಯಾಗಿ ಕರ್ನೂಲ್​​ ಹೀಗೆ ಮೂರು ರೀತಿಯ ರಾಜಧಾನಿಯನ್ನು ರಾಜ್ಯದಲ್ಲಿ ಸ್ಥಾಪಿಸುವ ಸಲುವಾಗಿ ಸದನದಲ್ಲಿ ಮಸೂದೆ ಮಂಡಿಸಿದ್ದಾರೆ.

2020ರ ಆಂಧ್ರಪ್ರದೇಶ ವಿಕೇಂದ್ರಿಕರಣ ಹಾಗೂ ಅಭಿವೃದ್ಧಿ ಮಸೂದೆ ಪ್ರಕಾರ ರಾಜ್ಯದ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದು ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details