ಮುಂಬೈ:ಯಶ್ ರಾಜ್ ಫಿಲ್ಮ್ಸ್ (ವೈಆರ್ಎಫ್) ನಿರ್ಮಿಸಲಿರುವ ಹಾಸ್ಯ ಚಿತ್ರದಲ್ಲಿ ನಟ ವಿಕ್ಕಿ ಕೌಶಲ್ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಜೊತೆ ನಟಿಸುತ್ತಿದ್ದಾರೆ.
ಮಾನುಷಿ ಚಿಲ್ಲರ್ ಜೊತೆ ರೊಮಾನ್ಸ್ ಮಾಡಲಿದ್ದಾರೆ ವಿಕಿ ಕೌಶಲ್
ಯಶ್ ರಾಜ್ ಫಿಲ್ಮ್ಸ್ (ವೈಆರ್ಎಫ್) ನಿರ್ಮಿಸಲಿರುವ ಹಾಸ್ಯ ಚಿತ್ರದಲ್ಲಿ ನಟ ವಿಕ್ಕಿ ಕೌಶಲ್ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಜೊತೆ ನಟಿಸುತ್ತಿದ್ದಾರೆ.
"ವೈಆರ್ಎಫ್ ನಿರ್ಮಿಸುತ್ತಿರುವ ಹಾಸ್ಯ ಚಿತ್ರಕ್ಕಾಗಿ ಮಾನುಷಿ ವಿಕ್ಕಿಗೆ ಸಾಥ್ ನೀಡಲು ಸಹಿ ಹಾಕಿದ್ದಾರೆ. ಮಾನುಷಿ ಹೊರಗಿನವರೇ ಆದರೂ ಪ್ರಿಯಾಂಕಾ ಚೋಪ್ರಾ ಪ್ರಶಸ್ತಿ ಗೆದ್ದ 17 ವರ್ಷಗಳ ನಂತರ ಮಿಸ್ ವರ್ಲ್ಡ್ 2017 ಕಿರೀಟವನ್ನು ಗೆಲ್ಲುವ ಮೂಲಕ ಛಾಪು ಮೂಡಿಸಿದ್ದಾರೆ. ಮತ್ತು ಪೃಥ್ವಿರಾಜ್ ಅವರ ಮೆರಿಟ್ ಮೇರೆಗೆ ಅವರು ಅದ್ಬುತ ಆಡಿಷನ್ ನೀಡಿ ಬಂದಿದ್ದಾರೆ ಎಂದು ಮೂಲವು ತಿಳಿಸಿದೆ.
"ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಪ್ರಸ್ತುತ ಹಂಚಿಕೊಳ್ಳಲು ಸಾಧ್ಯವಿಲ್ಲ" ಆದರೆ, ಈ ಚಿತ್ರವು ವೈಆರ್‌ಎಫ್‌ನ ಪ್ರಾಜೆಕ್ಟ್ 50 ರ ಪ್ರಮುಖ ಭಾಗವಾಗಿದೆ. ಇದು ಹಲವಾರು ಮೆಗಾ ಪ್ರಾಜೆಕ್ಟ್ಗಳಿಗೆ ಭರವಸೆ ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.