ಗೋಪಾಲಗಂಜ್(ಬಿಹಾರ) :ಇಲ್ಲಿನ ಆಸ್ಪತ್ರೆಯೊಂದರ ಐಸೋಲೇಷನ್ ವಾರ್ಡ್ನಲ್ಲಿ ಕೊರೊನಾ ಸೋಂಕಿತ ಯುವಕನೋರ್ವ ಮದ್ಯಪಾನ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಐಸೋಲೇಷನ್ ವಾರ್ಡ್ನಲ್ಲಿ ಮದ್ಯಪಾನ ಮಾಡಿದ ಸೋಂಕಿತ ಯುವಕ : ವಿಡಿಯೋ - ಬಿಹಾರ ಲೆಟೆಸ್ಟ್ ನ್ಯೂಸ್
ಸೋಂಕಿತ ಆಸ್ಪತ್ರೆಗೆ ಬರುವಾಗ ಜೊತೆಗೆ ಮದ್ಯದ ಬಾಟಲಿಗಳನ್ನು ಜೊತೆಗೆ ತಂದಿದ್ದನೋ ಎಂಬುದರ ಕುರಿತಂತೆ ತನಿಖೆ ನಡೆಸಲಾಗುವುದೆಂದು ಡಿಎಂ ಭರವಸೆ ನೀಡಿದ್ದಾರೆ..
ಐಸೋಲೇಷನ್ ವಾರ್ಡ್ನಲ್ಲಿ ಮದ್ಯಪಾನ ಮಾಡಿದ ಸೋಂಕಿತ ಯುವಕ
ಜಿಲ್ಲೆಯ ಸದರ್ ಉಪವಿಭಾಗದ ಅಧೀನದಲ್ಲಿರುವ ಸಿಧ್ವಾಲಿಯಾದ ಖಾಸಗಿ ಆಸ್ಪತ್ರೆಯಲ್ಲಿ ಯುವಕನೊಬ್ಬ ಮದ್ಯಪಾನ ಮಾಡಿದ್ದಾನೆ. ಈ ಕುರಿತಂತೆ ಸೋಂಕಿತನಿಗೆ ಯಾರು ಮತ್ತು ಹೇಗೆ ಮದ್ಯಪಾನ ನೀಡಿದ್ದಾರೆ. ಸೋಂಕಿತ ಆಸ್ಪತ್ರೆಗೆ ಬರುವಾಗ ಜೊತೆಗೆ ಮದ್ಯದ ಬಾಟಲಿಗಳನ್ನು ಜೊತೆಗೆ ತಂದಿದ್ದನೋ ಎಂಬುದರ ಕುರಿತಂತೆ ತನಿಖೆ ನಡೆಸಲಾಗುವುದೆಂದು ಡಿಎಂ ಭರವಸೆ ನೀಡಿದ್ದಾರೆ.
ಯುವಕನೋರ್ವ ಆಸ್ಪತ್ರೆ ವಾರ್ಡ್ನಲ್ಲಿ ಮದ್ಯಪಾನ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.