ಕರ್ನಾಟಕ

karnataka

ETV Bharat / bharat

ಪಬ್​ ಜಿ​​​ ಆಡಬೇಡ ಎಂದು ಪೋಷಕರ ಕಿವಿಮಾತು: ಆತ್ಮಹತ್ಯೆ ಮಾಡಿಕೊಂಡ ಯುವಕ! - ಆತ್ಮಹತ್ಯೆ ಮಾಡಿಕೊಂಡ ಯುವಕ

ದೇಶಾದ್ಯಂತ ಪಬ್​ ಜಿ ಗೇಮ್​ ಬ್ಯಾನ್​ ಮಾಡಲಾಗಿದೆ. ಇದರ ಮಧ್ಯೆ ಗೇಮ್​ ಆಡಬೇಡ ಎಂದು ಪೋಷಕರು ಕಿವಿಮಾತು ಹೇಳಿದ್ದರಿಂದ ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

PubG Game
PubG Game

By

Published : Sep 3, 2020, 4:29 PM IST

ಮೋತಿಹಾರಿ(ಬಿಹಾರ): ಪಬ್​ ಜಿ ಮೊಬೈಲ್​ ಗೇಮ್​​ ಆಡಬೇಡ ಎಂದು ಪೋಷಕರು ಗದರಿಸಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಮೊಬೈಲ್​ನಲ್ಲಿ ಪಬ್​ ಜಿ ಗೇಮ್​ ಆಡ್ತಿದ್ದ ಮಗನಿಗೆ ಬುದ್ಧಿವಾದ ಹೇಳಿರುವ ತಂದೆ-ತಾಯಿ ಕೋಪದಲ್ಲಿ ಬೈದಿದ್ದಾರೆ. ಇದಿರಂದ ನೊಂದು ಮನೆಬಿಟ್ಟು ಹೋಗಿರುವ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕನ ಮೃತದೇಹ ಪೊಲೀಸರು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಮನೆಯಲ್ಲಿ ಬೈಯುತ್ತಿದ್ದಂತೆ ಎರಡು ದಿನಗಳ ಹಿಂದೆ ಆತ ಮನೆಬಿಟ್ಟು ಹೋಗಿದ್ದನು.

ಮಗ ಮನೆ ಬಿಟ್ಟು ಹೋಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಷಕರು ತಮ್ಮ ಅಳಲು ಹೇಳಿಕೊಂಡಿದ್ದರು. ಜತೆಗೆ ಇತರರ ಬಳಿ ವಿಚಾರಿಸಿದ್ದರು. ಈ ವೇಳೆ ಆತನ ಮಾಹಿತಿ ಸಿಗದ ಕಾರಣ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದರು. ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಇಂದು ಆತನ ಮೃತದೇಹ ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details