ಹರಿಯಾಣ: ದೇವಾಲಯದ ಅರ್ಚಕನೊಬ್ಬನನ್ನು ಮನಬಂದಂತೆ ಥಳಿಸಿರುವ ಘಟನೆ ಫತೇಹಾಬಾದ್ನ ಧಾಬಿ ಕಲಾನ್ ಗ್ರಾಮದಲ್ಲಿ ನಡೆದಿದೆ. ಕೆಲವು ಯುವಕರು ಸೇರಿ ಅರ್ಚಕನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಕ್ರಿಕೆಟ್ ಬ್ಯಾಟ್‌ನಿಂದ ಅರ್ಚಕನ ಮೇಲೆ ಹಲ್ಲೆ.. ವಿಡಿಯೋ ವೈರಲ್.. - fatehabad priest viral video
ಅರ್ಚಕನೊಬ್ಬನಿಗೆ ಯುವಕರ ಗುಂಪೊಂದು ಬ್ಯಾಟ್‌ನಿಂದ ಮನಬಂದಂತೆ ಥಳಿಸಿದ್ದು, ವಿಡಿಯೋ ವೈರಲ್ ಆಗಿದೆ..
ಕ್ರಿಕೆಟ್ ಬ್ಯಾಟ್‌ನಿಂದ ಅರ್ಚಕನ ಮೇಲೆ ಹಲ್ಲೆ
ಕ್ರಿಕೆಟ್ ಬ್ಯಾಟ್‌ನಿಂದ ಪೂಜಾರಿಯನ್ನು ಹೊಡೆಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಪೂಜಾರಿಯು ಪದೇಪದೆ ಕ್ಷಮೆ ಕೇಳುತ್ತಿದ್ದು, ಆದರೂ ಹುಡುಗರು ಹೊಡೆದಿದ್ದಾರೆ. ಬಳಿಕ ಸುತ್ತಮುತ್ತಲಿನ ಜನರು ಬಂದು ಪೂಜಾರಿಯನ್ನು ರಕ್ಷಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.